ರೈಲ್ವೆ ಬ್ರಿಡ್ಜ್ ಓಪನ್ : ಜನಸಾಮಾನ್ಯರಿಗೆ ನಿರಾಳ ಸಂಚಾರ
ಗದಗ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ-ಬೆಟಗೇರಿ ಭಾಗದ ಜನರಿಗೆ ದೀರ್ಘಕಾಲದಿಂದ ತೊಂದರೆ ಉಂಟುಮಾಡಿದ್ದ ಅಬ್ದುಲ್ ಕಲಾಂ ಶಾದಿ ಮಹಲ್ ಸಮೀಪದ ರೈಲ್ವೆ ಬ್ರಿಡ್ಜ್ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಅಧಿಕಾರಿಗಳಿಂದ ಬಂದ್ ಮಾಡಲಾಗಿದ್ದ ಈ ಬ್ರಿಡ್ಜ್ ಇದೀಗ ಪುನಃ ಸಾರ್ವಜನಿಕರ ಸಂಚಾರಕ್ಕೆ ತೆರೆಯಲ
ಫೋಟೋ


ಗದಗ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ-ಬೆಟಗೇರಿ ಭಾಗದ ಜನರಿಗೆ ದೀರ್ಘಕಾಲದಿಂದ ತೊಂದರೆ ಉಂಟುಮಾಡಿದ್ದ ಅಬ್ದುಲ್ ಕಲಾಂ ಶಾದಿ ಮಹಲ್ ಸಮೀಪದ ರೈಲ್ವೆ ಬ್ರಿಡ್ಜ್ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಅಧಿಕಾರಿಗಳಿಂದ ಬಂದ್ ಮಾಡಲಾಗಿದ್ದ ಈ ಬ್ರಿಡ್ಜ್ ಇದೀಗ ಪುನಃ ಸಾರ್ವಜನಿಕರ ಸಂಚಾರಕ್ಕೆ ತೆರೆಯಲ್ಪಟ್ಟಿದ್ದು, ಸ್ಥಳೀಯರಲ್ಲಿ ಹರ್ಷ ಮೂಡಿಸಿದೆ.

ಈ ಬ್ರಿಡ್ಜ್ ಬಂದ್ ಆಗಿದ್ದರಿಂದ ಶಾಲಾ ಮಕ್ಕಳು, ತುರ್ತು ಚಿಕಿತ್ಸೆಗೆ ತೆರಳಬೇಕಾದ ರೋಗಿಗಳು ಹಾಗೂ ಬೆಟಗೇರಿ ಭಾಗದ ಸಾರ್ವಜನಿಕರು ಪ್ರತಿದಿನವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ದೂರದ ಮಾರ್ಗಗಳನ್ನು ಬಳಸಬೇಕಾದ ಅನಿವಾರ್ಯತೆ ಜನರಿಗೆ ಹೆಚ್ಚುವರಿ ಕಷ್ಟ ತಂದೊಡ್ಡಿತ್ತು.

ಸಮಸ್ಯೆಯ ತೀವ್ರತೆಯನ್ನು ಮನಗಂಡು ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಸೂಚನೆ ಮೇರೆಗೆ, ರೈಲ್ವೆ ಅಧಿಕಾರಿಗಳು ಬ್ರಿಡ್ಜ್ ಅನ್ನು ಪುನಃ ತೆರೆಯುವಂತೆ ಕ್ರಮ ಕೈಗೊಂಡಿದ್ದಾರೆ.

ಇದರಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ಮಾಜಿ ಸಚಿವರು, ಶಾಸಕರಾದ ಸಿ ಸಿ ಪಾಟೀಲ್ ಮತ್ತು ಎಂಎಲ್ಸಿ ಎಸ್ ವಿ ಸಂಕನೂರು ಅವರು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಮುಖ ಪಾತ್ರವಹಿಸಿದ್ದಾರೆ.

ಬ್ರಿಡ್ಜ್ ತೆರೆಯಲ್ಪಟ್ಟ ಹಿನ್ನೆಲೆಯಲ್ಲಿ ಗದಗ-ಬೆಟಗೇರಿ ಭಾಗದ ಜನರಿಗೆ ಸಂಚಾರ ಸುಗಮವಾಗಿದ್ದು, ದಿನನಿತ್ಯದ ಜೀವನದಲ್ಲಿ ಸಾಕಷ್ಟು ಅನುಕೂಲವಾಗಿದೆ. ಸ್ಥಳೀಯರು ಜನಪ್ರತಿನಿಧಿಗಳ ತ್ವರಿತ ಸ್ಪಂದನೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಟಗೇರಿ ಭಾಗದ ಸಾರ್ವಜನಿಕರಾದ ಶಿವರಾಜಗೌಡ ಹಿರೇಮನಿಪಾಟೀಲ್, ಮಹೇಶ್ ಕೋಟಿ, ಮುದಕಪ್ಪ ಹೋಳಿ, ಅಂದಪ್ಪ ಮುಲ್ಲಾಳ್, ಹರೀಶ್ ಪೂಜಾರ್, ಸತೀಶ್ ಪೂಜಾರ್, ಗವಿಸಿದ್ದಪ್ಪ ಚಲವಾದಿ, ಹರೀಶ್ ರಾಂಪುರ, ಅಜ್ಜನಗೌಡ ಹಿರೇಮನಿಪಾಟೀಲ್, ಮುತ್ತಣ್ಣ ಧೋನಿ, ಸಿದ್ದು ಮಾಕಾಪುರ್ ಸೇರಿದಂತೆ ಶರಣಬಸವೇಶ್ವರಿ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande