
ಕೊಪ್ಪಳ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೊಪ್ಪಳದ ನೀರಿನ ಪಂಪಹೌಸ್ ಹತ್ತಿರದ ಬೆಂಕಿನಗರದ ನಿವಾಸಿ 82 ವರ್ಷದ ಹುಸೇನಪ್ಪ ತಂದೆ ಯಮನಪ್ಪ ಈಳಿಗೇರ ಎಂಬ ವ್ಯಕ್ತಿ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹುಸೇನಪ್ಪ ತಂದೆ ಯಮನಪ್ಪ ಈಳಿಗೇರ ಎಂಬ ವ್ಯಕ್ತಿಯು 2025ರ ಮಾರ್ಚ್ 26 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಮ್ಮ ಸಂಬಂಧಿಕರ ತಿಥಿ ಕಾರ್ಯಕ್ರಮಕ್ಕೆ ಹೋಗಿ ನಂತರ ಗಂಗಾವತಿಗೆ ಹೋಗಿ ಬರುತ್ತೆನೆ ಎಂದು ಹೇಳಿ ಹೋದವರು ಇಲ್ಲಿಯವರೆಗೂ ಪತ್ತೆಯಾಗಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಮಗ ಯಮನೂರಪ್ಪ ತಂದೆ ಹುಸೇನಪ್ಪ ಈಳಿಗೇರ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 75/2025 ರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿ ಚಹರೆ ವಿವರ: ಹುಸೇನಪ್ಪ ತಂದೆ ಯಮನಪ್ಪ ಈಳಿಗೇರ ವಯಸ್ಸು 82 ವರ್ಷ, 5.5 ಎತ್ತರ, ಸಾದಾಗಪ್ಪು ಮೈಬಣ್ಣ, ತಲೆಯಲ್ಲಿ ಬಿಳಿಯ ಕೂದಲುಗಳು, ಸಾಧಾರಣ ಮೈಕಟ್ಟು ಹೊಂದಿದ್ದಾರೆ.
ಕಾಣೆಯಾದಾಗ ಬಿಳಿಯ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ.
ಈ ವ್ಯಕ್ತಿ ಯಾರಿಗಾದರು ಕಂಡು ಬಂದಲ್ಲಿ ಅಥವಾ ಇತನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ: ನಂ: 08539-230100 ಮತ್ತು 230222, ಪೊಲೀಸ ಇನ್ಸಪೆಕ್ಟರ್ ನಗರ ಪೊಲೀಸ ಠಾಣೆ ಕೊಪ್ಪಳ ಮೊ.ಸಂ: 9480803745, ಕೊಪ್ಪಳ ನಗರ ಠಾಣೆ ದೂರವಾಣಿ ನಂ: 08539-220333 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್