ಕೊಪ್ಪಳ ಮಸ್ಜಿದ್ ಏ ಖೂಬಾ ಕಟ್ಟಡ ; ಆಕ್ಷೇಪಣೆ ಆಹ್ವಾನ
ಕೊಪ್ಪಳ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಷ್ಟಗಿ ರಸ್ತೆಯಲ್ಲಿ ಮಸ್ಜಿದ್ ಏ ಖೂಬಾ ಪ್ರಾರ್ಥನಾ ಕಟ್ಟಡ ನಿಮಾರ್ಣಕ್ಕೆ ಪರವಾನಿಗೆಗಾಗಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿ ಬರುವ ಸರ್ವೆ ನಂಬರ್: 91/1 ಪ್ಲಾಟ್ ನಂ. 37 ಮ
ಕೊಪ್ಪಳ ಮಸ್ಜಿದ್ ಏ ಖೂಬಾ ಕಟ್ಟಡ ; ಆಕ್ಷೇಪಣೆ ಆಹ್ವಾನ


ಕೊಪ್ಪಳ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಷ್ಟಗಿ ರಸ್ತೆಯಲ್ಲಿ ಮಸ್ಜಿದ್ ಏ ಖೂಬಾ ಪ್ರಾರ್ಥನಾ ಕಟ್ಟಡ ನಿಮಾರ್ಣಕ್ಕೆ ಪರವಾನಿಗೆಗಾಗಿ ಆಕ್ಷೇಪಣೆ ಆಹ್ವಾನಿಸಲಾಗಿದೆ.

ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿ ಬರುವ ಸರ್ವೆ ನಂಬರ್: 91/1 ಪ್ಲಾಟ್ ನಂ. 37 ಮತ್ತು 38ರ ಮಸ್ಜಿದ್ ಏ ಖೂಬಾ ಅಹಲೆ ಸುನ್ನತ್ ವಲ್ ಜಮಾಆತ ಕುಷ್ಟಗಿ ರೋಡ್ ಕೊಪ್ಪಳ ಇವರ ಪರವಾಗಿ ಹಾಲಿ ಅಧ್ಯಕ್ಷರಾದ ಮರ್ದಾನಸಾಬ ತಂದೆ ರಾಜೇಸಾಬ ಸರ್ದಾರಖಾನ್ ಇವರು, ಮಸೀದಿಯ ನೆಲ ಮತ್ತು ಮೊದಲನೆ ಮಹಡಿ ಪ್ರಾರ್ಥನಾ ಕಟ್ಟಡ ಕಟ್ಟಲು ಕಟ್ಟಡ ಪರವಾನಿಗೆ ಜಾಗಗಳಿಗೆ ಸಂಬಂಧಪಟ್ಟ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

ಈ ಕುರಿತು ಯಾರದ್ದಾದರೂ ಆಕ್ಷೇಪಣೆ ಇದ್ದಲ್ಲಿ, ಈ ಪ್ರಕಟಣೆ ಪ್ರಕಟಗೊಂಡ 15 ದಿನಗಳೊಳಗಾಗಿ ಅಗತ್ಯ ದಾಖಲಾತಿಗಳು ಮತ್ತು ಸೂಕ್ತ ಕಾರಣಗಳೊಂದಿಗೆ ನಗರಸಭೆ ಕಾರ್ಯಾಲಯದಲ್ಲಿ ಲಿಖಿತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೊಪ್ಪಳ ನಗರ ಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande