ಬಾಗಲಕೋಟೆ ಎಪಿಎಂಸಿ ಮಾರ್ಗದಲ್ಲಿ ಲಾರಿ ಪಲ್ಟಿ ; ಚಾಲಕನ ಕೈಗೆ ಗಾಯ
ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಾಗಲಕೋಟೆ ಎಪಿಎಂಸಿ ಮಾರ್ಗವಾಗಿ ಮುಚಗಂಡಿ ದೇವಸ್ಥಾನದ ಹತ್ತಿರ ಇರುವ ತಿರುಗು ರಸ್ತೆಯಲ್ಲಿ ಹೋಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಲಾರಿ ಚಾಲಕ ಹಣಮಂತ ಮಾಯಣ್ಣವರ್ (ಸಾ: ಕಲಾದಗಿ) ಅವರಿಂದ ಚಾಲನೆ ಮಾಡಲಾಗುತ್ತಿದ್ದು, ತಿರುಗು
ಪಲ್ಟಿ


ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಾಗಲಕೋಟೆ ಎಪಿಎಂಸಿ ಮಾರ್ಗವಾಗಿ ಮುಚಗಂಡಿ ದೇವಸ್ಥಾನದ ಹತ್ತಿರ ಇರುವ ತಿರುಗು ರಸ್ತೆಯಲ್ಲಿ ಹೋಗುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಲಾರಿ ಚಾಲಕ ಹಣಮಂತ ಮಾಯಣ್ಣವರ್ (ಸಾ: ಕಲಾದಗಿ) ಅವರಿಂದ ಚಾಲನೆ ಮಾಡಲಾಗುತ್ತಿದ್ದು, ತಿರುಗು ರಸ್ತೆಯಲ್ಲಿ ಹೋಗುವ ವೇಳೆ ಆಯಾ ತಪ್ಪಿದ ಪರಿಣಾಮ ಲಾರಿ ಪಲ್ಟಿಯಾಗಿದೆ.

ಘಟನೆಯಲ್ಲಿ ಚಾಲಕನಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಚಾಲಕನ ಕೈಗೆ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರಗೆ ರವಾನಿಸಲಾಗಿದೆ.

ಲಾರಿ ಪಲ್ಟಿ ಆದ ಹಿನ್ನೆಲೆಯಲ್ಲಿ ಸಂಚಾರದಲ್ಲಿ ವ್ಯಥೆ ಉಂಟಾಗಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸುಗಮ ಸಂಚಾರಕ್ಜೆ ಅನುವು ಮಾಡಿಕೊಡಲಾಯಿತು.

ವಾಹನ ಚಾಲಕರು ರಸ್ತೆಗಳಲ್ಲಿ ಸಂಚರಿಸುವಾಗ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಶೇಷವಾಗಿ ಸೀಟ್ ಬೆಲ್ಟ್ ಧರಿಸಿಕೊಂಡು ವಾಹನವನ್ನು ಜಾಗರೂಕತೆಯಿಂದ ಚಲಾಯಿಸಬೇಕು ಎಂದು ಪೊಲೀಸರು ಸೂಚಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande