



ಕೊಪ್ಪಳ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ (ರಿ), ಭಾಗ್ಯನಗರ ಇವರ ಸಹಯೋಗದಲ್ಲಿ ಭಾಗ್ಯನಗರದ ಉದ್ಯಾನವನದಲ್ಲಿ ನೀಲಕಂಠೇಶ್ವರ ದೇವಾಸ್ಥಾನ ಎದುರುಗಡೆ `ಕಲಾ ಸಂಗಮ’ ದಲ್ಲಿ ನಡೆಯಿತು.
ಪತ್ರಕರ್ತ ದೊಡ್ಡೇಶ ಎಲಿಗಾರ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಗೀತ ಸಾಮಾನ್ಯರಿಗೆ ಅಲ್ಲ , ಅಸಾಮಾನ್ಯರಿಗೆ ಮಾತ್ರ ಸಂಗೀತ ಒಲಿಯುತ್ತದೆ, ಸಂಗೀತ ನಮ್ಮ ಸುಖದ ಸಂದರ್ಭದಲ್ಲೂ, ಮತ್ತು ದುಃಖದ ಸಂದರ್ಭದಲ್ಲೂ, ಸರ್ವ ಸಂದರ್ಭದಲ್ಲೂ ನಮ್ಮ ಜೊತೆಗೆ ಇರುತ್ತದೆ, ಇದು ಗುರು ಸ್ಮರಣಾರ್ಥ ಕಾರ್ಯಕ್ರಮವಾಗಿದೆ, ಸಂಗೀತಕ್ಕೆ ಬಡವ ಶ್ರೀಮಂತ ಜಾತಿ ಧರ್ಮ ಎಂಬ ಭೇದವಿಲ್ಲ, ಭಾಗ್ಯನಗರದಲ್ಲಿ ಕೇವಲ ಸೀರೆ & ಕೂದಲು ವ್ಯಾಪಾರಕ್ಕೆ ಸೀಮಿತ ಇರದೆ ಕಲೆ-ಸಾಹಿತ್ಯದಲ್ಲೂ ಕೂಡಾ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆ ಸುಮಾರು 24 ವರ್ಷ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ ಈ ಜಿಲ್ಲೆಯಲ್ಲಿ ನೋಂದಣಿಯಾದ ಪ್ರಥಮ ಸಂಗೀತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಕರ್ಣ ಕುಮಾರ್ ಅವರು, ಮನುಷ್ಯ ಸಂಘ ಜೀವಿ ಮತ್ತು ಸಂಘರ್ಷ ಜೀವಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವ ಉದ್ದೇಶ ಮುಖ್ಯವಾಗಿ ಗ್ರಾಮೀಣ ಕಲೆಗಳಿಗೆ ಪೆÇ್ರೀತ್ಸಾಹ ನೀಡುವುದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಎಲ್ಲಾ ಸಂಘ ಸಂಸ್ಥೆಗಳಿಗೆ ಈ ಮೂಲಕ ಮನವಿ ಮಾಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರಪ್ಪ ಉಪ್ಪಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೊನ್ನುರಸಾಬ್ ಭೈರಾಪುರ, ಪರಶುರಾಮ ನಾಯಕ , ರೇವಣಸಿದ್ದಸಾ ಶಿದ್ಲಿಂಗ ಮತ್ತಿತರರು ಉಪಸ್ಥಿತರಿದ್ದರು.
ಕಲಾ ವೃಂದದಲ್ಲಿ ನಾಗರಾಜ್ ಶ್ಯಾವಿ ಅವರಿಂದ ಮಂಗಲವಾದ್ಯ, ಆನಂದ ಪಾಟೀಲ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಯುವರಾಜ್ ಹೀರೆಮಠ ಅವರಿಂದ ವಚನಗಾಯನ, ಮಹೆಬೂಬಸಾಬ ಅವರಿಂದ ಜಾನಪದ ಗೀತೆ, ವೈದೇಹಿ ವ್ಯಾಸಮುದ್ರಿ ಅವರಿಂದ ದಾಸವಾಣಿ, ಪ್ರತಿಭಾ ಹಿರೇಮಠ ಅವರಿಂದ ಸುಗಮ ಸಂಗೀತ, ಸ್ಪಂದನ ಅವರಿಂದ ದಾಸವಾಣಿ, ತಿಪ್ಪೇಶ್ ಹಿರೇಮಠ ಬೆಂಗಳೂರು ಅವರಿಂದ ಸುಗಮ ಸಂಗೀತ , ದೀಕ್ಷಾ ಹೆಗಡೆ ಹಾಗೂ ತಂಡ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು
ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ ಹಾಗೂ ರಾಘವೇಂದ್ರ ಗಂಗಾವತಿ, ಗಿಟಾರ್ನಲ್ಲಿ ತಿಪ್ಪೇಶ ಹಿರೇಮಠ, ಡೋಲಕ್ನಲ್ಲಿ ನಂದೀಶ್ ಹಿರೇಮಠ, ರಿದಂ ಪ್ಯಾಡನಲ್ಲಿ ಸಂಜನ್ ಬೆಲ್ಲಾದ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್