
ಕೊಪ್ಪಳ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನ ಸಮಾರಂಭದಲ್ಲಿ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಕೊಪ್ಪಳದ ಜಿಲ್ಲಾ ನ್ಯೂಸ್ ಫಸ್ಟ್ ಕನ್ನಡ ವರದಿಗಾರ ರಾಜು ಬಿ.ಆರ್. ಆಯ್ಕೆಯಾಗಿದ್ದಾರೆ.
ಎಪ್ರಿಲ್ 11,12 ರಂದು ಬೀದರ್ ಜಿಲ್ಲೆಯಲ್ಲಿ ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮ್ಮೇಳನದಲ್ಲಿ ವಿಶೇಷವಾಗಿ
ವಿದ್ಯುನ್ಮಾನ (ಟಿವಿ) ವಿಭಾಗದಲ್ಲಿ ಅಭಿವೃದ್ಧಿ/ಸಾಮಾಜಿಕ/ಮಾನವೀಯ ವರದಿಗೆ ಕೆಯು ಡಬ್ಲ್ಯೂಜೆ ವಾರ್ಷಿಕ ಪ್ರಶಸ್ತಿಯನ್ನು ಕೊಪ್ಪಳ ಜಿಲ್ಲೆಯ ನ್ಯೂಸ್ ಫಸ್ಟ್ ಕನ್ನಡ ಜಿಲ್ಲಾ ವರದಿಗಾರರು ಹಾಗೂ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ರಾಜು.ಬಿ.ಆರ್.ಆಯ್ಕೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್