
ದಾವಣಗೆರೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದಲ್ಲಿ ಉಪ ಚುನಾವಣೆ ಬಂದಿದೆ ಅಂತ ಕುರ್ಚಿ ಕದನಕ್ಕೆ ವಿರಾಮ ಸಿಕ್ಕಿದೆ. ಮೇ ತಿಂಗಳಲ್ಲಿ ರಾಜ್ಯದಲ್ಲಿ ಜಂಗಿ ನಿಕಾಲಿ ಕುಸ್ತಿ ನಡೆಯಲಿದೆ. ಆರ್ಯ ವೈಶ್ಯ ಸಮಾಜ ಲೆಕ್ಕಾಚಾರ ಹಾಕಿ ಈ ಭ್ರಷ್ಟ ಸರ್ಕಾರ ಕಿತ್ತು ಹಾಕಿ ಮತ್ತೊಮ್ಮೆ ಜನಪರವಾದ ಬಿಜೆಪಿ ಅಧಿಕಾರಕ್ಕೆ ಬರಲು ಮತ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ದಾವಣಗೆರೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ನಗರದ ಡಿ.ಸಿ.ಎಂ ಟೌನ್ ನಲ್ಲಿರುವ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಮಾಜದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರವಾಗಿ ಮತಯಾಚನೆ ಮಾಡಿದರು. ಆರ್ಯ ವೈಶ್ಯ ಸಮಾಜ ಒಂದು ಶಿಸ್ತಿನ ಸಮಾಜ ಮತ್ರು ಎಲ್ಲರನ್ನೂ ಕೂಡ ಪರ್ಪೆಕ್ಟ್ ಲೆಕ್ಕಾಚಾರ ಹಾಕಿ ತೀರ್ಮಾನ ಮಾಡುವ ಸಮಾಜ. ಇಲ್ಲಿ ಬಿಜೆಪಿಯ ಜಯಭೇರಿ 30 ವರ್ಷದಿಂದ ಸಿಕ್ಕಿಲ್ಲ. ನಿಮ್ಮ ಲೆಕ್ಕಾಚಾರದಿಂದ ಜಯ ಸಿಗಲಿದೆ ಎಂದರು.
ರಾಜ್ಯದ ಹಣೆ ಬರಹ ಬದಲಾವಣೆ ಮಾಡುವ ಚುನಾವಣೆ ಇದು. ಕಾಂಗ್ರೆಸ್ ಅಧಿಕಾರದ ಅಹಂಕಾರದಲ್ಲಿ ತೇಲಾಡುತ್ತಿದೆ. ಅವರಿಗೆ ಯಾರೂ ಕಣ್ಣಿಗೆ ಕಾಣಿಸುತ್ತಿಲ್ಲ. ಯಾವ ಸಮಾಜದ ಬಗ್ಗೆಯೂ ಗೌರವ ಇಲ್ಲ. ಅಹಿಂದಾ ಸಮಾಜಕ್ಕೆ ಅವಮಾನ ಮಾಡಿದ ಸರ್ಕಾರ ಕಾಂಗ್ರೆಸ್ ಪಕ್ಷ. ಕಳೆದ ವರ್ಷ 410 ಕೋಟಿ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ಇಟ್ಟಿದ್ದರು. ಆ ಹಣವನ್ನು ಜಾತಿ ಗಣತಿಗೆ ನೀಡಿ, ಹಿಂದುಳಿದ ವರ್ಗಗಳ ನಿಗಮಗಳಿಗೆ ಶೂನ್ಯ ನೀಡಿದರು. ಜಾತಿ ಗಣತಿ ಕೇವಲ ಹಿಂದುಳಿದವರಿಗೆ ಇದಿಯಾ ಬೇರೆ ಜಾತಿ ಗಣತಿ ಮಾಡಿಲ್ವಾ ? ಹಿಂದುಳಿದ ವರ್ಗಕ್ಕೆ ಶೂನ್ಯ ಕೊಟ್ಟ ನಾಯಕ ಸಿದ್ದರಾಮಯ್ಯ. ಚುನಾವಣೆ ಬಂದಾಗ ಅಹಿಂದಾ ವರ್ಗದವರು ನೀವು ಮುಂದೆ ಬನ್ನಿ ಅಂತಾರೆ, ಅಧಿಕಾರಕ್ಕೆ ಬಂದಾಗ ನೀವು ಹಿಂದೆ ಉಳಿಯಿರಿ ನಾವು ಮುಂದೆ ಹೋಗುತ್ತೇವೆ ಎನ್ನುತ್ತಾರೆ ಎಂದು ಆರೋಪಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa