ಕೊಪ್ಪಳ : ಬೇಸಿಗೆಯಲ್ಲಿ ಹತ್ತಿ ನಾಟಿ ಬೇಡ
ಕೊಪ್ಪಳ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ರೈತರು ಬೇಸಿಗೆ ಅವಧಿಯಲ್ಲಿ ಹತ್ತಿ ಬೆಳೆಯನ್ನು ನಾಟಿ ಮಾಡದಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಹತ್ತಿ ಬೆಳೆಯು ಕೊಪ್ಪಳ ತಾಲೂಕಿನ ಮುಂಗಾರು ಹಂಗಾಮಿನಲ್ಲಿ ಬೆಳೆಯಬಹುದಾದ ಪ್ರಮುಖ ಬೆಳೆಯಾಗಿದ್ದು, ಕೃಷಿ ವಿಶ್ವವಿದ್ಯಾಲಯದ ಶಿಫಾರಸ್ಸ
ಕೊಪ್ಪಳ : ಬೇಸಿಗೆಯಲ್ಲಿ ಹತ್ತಿ ನಾಟಿ ಬೇಡ


ಕೊಪ್ಪಳ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರೈತರು ಬೇಸಿಗೆ ಅವಧಿಯಲ್ಲಿ ಹತ್ತಿ ಬೆಳೆಯನ್ನು ನಾಟಿ ಮಾಡದಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹತ್ತಿ ಬೆಳೆಯು ಕೊಪ್ಪಳ ತಾಲೂಕಿನ ಮುಂಗಾರು ಹಂಗಾಮಿನಲ್ಲಿ ಬೆಳೆಯಬಹುದಾದ ಪ್ರಮುಖ ಬೆಳೆಯಾಗಿದ್ದು, ಕೃಷಿ ವಿಶ್ವವಿದ್ಯಾಲಯದ ಶಿಫಾರಸ್ಸಿನಂತೆ ಬಿ.ಟಿ ಹತ್ತಿಯನ್ನು ಮೇ ಮಾಹೆಯಿಂದ ಜುಲೈ 15ರ ವರೆಗೆ ಬಿತ್ತಬಹುದಾಗಿದ್ದು, ಜೂನ್ 15ರೊಳಗಾಗಿ ಬಿತ್ತುವುದು ಅತೀ ಸೂಕ್ತವಾಗಿರುತ್ತದೆ.

ಮಾರ್ಚ್ ಹಾಗೂ ಏಪ್ರೀಲ್ ಮಾಹೆಯಲ್ಲಿ ರೈತರು ಬಿ.ಟಿ ಹತ್ತಿ ಬಿತ್ತನೆ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಹತ್ತಿ ಬೆಳೆಗಳಲ್ಲಿ ರೋಗ ಕೀಟ ಬಾಧೆ ಮತ್ತು ಇತರೇ ಸಮಸ್ಯೆ ಕಂಡು ಬೆಳವಣಿಗೆ ಕುಂಠಿತವಾಗಿ ಬೆಳೆಹಾನಿಯಾಗುವ ಸಂಭವವಿರುತ್ತದೆ. ಆದ್ದರಿಂದ ರೈತರು ಬಿ.ಟಿ ಹತ್ತಿ ಬಿತ್ತನೆಗೆ ಕೃಷಿ ವಿಶ್ವವಿದ್ಯಾಲಯ ನೀಡುವ ವಲಯವಾರು ಬಿತ್ತನೆಕಾಲವನ್ನು ಅನುಸರಿಸುವಂತೆ ಹಾಗೂ ಕಾಲಾವಧಿಯ ಮುಂಚೆ ಮತ್ತು ಮುಗಿದ ನಂತರ ಬಿ.ಟಿ ಹತ್ತಿ ಬಿತ್ತನೆ ಮಾಡದಂತೆ ರೈತ ಬಾಂಧವರಿಗೆ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande