ಮಹಿಳಾ ದಿನಾಚರಣೆಗೆ ತಾಲೂಕು ಸಮಾವೇಶಗಳು: ಎಸ್.ಆರ್.ಪಾಟೀಲ
ಧಾರವಾಡ, 05 ಮಾರ್ಚ್ (ಹಿ.ಸ.): ಆ್ಯಂಕರ್: ರಾಜ್ಯ ಸರ್ಕಾರದ ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ ಹಾಗೂ ಗೃಹಜ್ಯೋತಿ ಪಂಚ ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದಲ್ಲಿ ಗೌರವಿಸಿ, ಜಾಗೃತಿ ಮೂಡಿಸಲು ಸಮಾವೇಶಗಳನ್ನು ಆಯೋಜಿಸಲಾಗು
Meeting


ಧಾರವಾಡ, 05 ಮಾರ್ಚ್ (ಹಿ.ಸ.):

ಆ್ಯಂಕರ್:

ರಾಜ್ಯ ಸರ್ಕಾರದ ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ ಹಾಗೂ ಗೃಹಜ್ಯೋತಿ ಪಂಚ ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದಲ್ಲಿ ಗೌರವಿಸಿ, ಜಾಗೃತಿ ಮೂಡಿಸಲು ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಧಾರವಾಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಗಳ ದುರಪಯೋಗ ತಪ್ಪಿಸಿ ಅರ್ಹರಿಗೆ ಲಾಭ ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ತಿಳಿಸಿದರು. ಯುವನಿಧಿ ಕುರಿತು ಗ್ರಾಮಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಶಕ್ತಿ ಯೋಜನೆಗೆ 70 ಹೊಸ ಬಸ್‌ಗಳು ಲಭ್ಯವಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೇವೆ ಒದಗಿಸಲು ಸೂಚಿಸಿದರು. ಗೃಹಲಕ್ಷ್ಮಿ ಫಲಾನುಭವಿಗಳ ಮರಣದ ಪ್ರಕರಣಗಳಲ್ಲಿ ಅನಧಿಕೃತ ಹಣ ವಾಪಸು ಪಡೆಯುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ 11,501 ಅರ್ಜಿಗಳು ಸ್ವೀಕೃತವಾಗಿದ್ದು, 8,577 ಮಂದಿಗೆ ₹26.19 ಕೋಟಿ ಜಮೆಯಾಗಿದೆ. ಶಕ್ತಿ ಯೋಜನೆಯಡಿ 58.21 ಕೋಟಿ ಮಹಿಳೆಯರು ಉಚಿತ ಪ್ರಯಾಣಿಸಿದ್ದು, ₹1,47,329.07 ಲಕ್ಷ ಬಿಡುಗಡೆಗೊಂಡಿದೆ. ಗೃಹಜ್ಯೋತಿ (5.17 ಲಕ್ಷ ಫಲಾನುಭವಿಗಳು), ಗೃಹಲಕ್ಷ್ಮಿ (4.01 ಲಕ್ಷ ಫಲಾನುಭವಿಗಳಿಗೆ ₹1889.18 ಕೋಟಿ) ಮತ್ತು ಅನ್ನಭಾಗ್ಯ (3.62 ಲಕ್ಷ ಫಲಾನುಭವಿಗಳು) ಯೋಜನೆಗಳೂ ಯಶಸ್ವಿಯಾಗಿ ಜಾರಿಯಲ್ಲಿವೆ ಎಂದು‌ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande