
ಚಿತ್ರದುರ್ಗ, 05 ಮಾರ್ಚ್ (ಹಿ.ಸ.):
ಆ್ಯಂಕರ್:
ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷರಾದ ಅಂಜಿನಪ್ಪ ಅವರು ಚಿತ್ರದುರ್ಗ ನಗರದ ಬೀಜ ನಿಗಮದ ಕಚೇರಿ ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಂಬರುವ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಅಗತ್ಯವಿರುವ ಬಿತ್ತನೆ ಬೀಜಗಳ ಶೇಖರಣೆ, ವಹಿವಾಟು ಹಾಗೂ ಗುಣಮಟ್ಟದ ಕುರಿತು ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ತದನಂತರ ಕಸಬಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿದರು. ಕೇಂದ್ರಕ್ಕೆ ಬಂದಿದ್ದ ರೈತರೊಂದಿಗೆ ಸಂವಾದ ನಡೆಸಿ, ಕೃಷಿ ಸೌಲಭ್ಯಗಳು ಮತ್ತು ಬೀಜ ವಿತರಣೆ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಬೀಜ ನಿಗಮದ ಕಾರ್ಯದರ್ಶಿ ಎ. ಕಾರ್ತಿಕ್, ಕೃಷಿ ಅಧಿಕಾರಿ ಬಿ.ಎಂ.ಆಶಾರಾಣಿ ಹಾಗೂ ನಿಗಮದ ಸಿಬ್ಬಂದಿಗಳು ಮತ್ತು ರೈತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa