ಬೇಕರಿ ಉತ್ಪನ್ನಗಳ ಕೌಶಲ್ಯಾಭಿವೃದ್ಧಿ ತರಬೇತಿ
ಶಿವಮೊಗ್ಗ, 05 ಮಾರ್ಚ್ (ಹಿ.ಸ.): ಆ್ಯಂಕರ್:ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಮಾ.12ರಿಂದ ಏಪ್ರಿಲ್ 10ರವರೆಗೆ ಒಂದು ತಿಂಗಳ ಬೇಕರಿ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗಿದೆ. ಬಿಸ್ಕತ್ತು, ಕುಕೀಸ್, ವಿವಿಧ ಕೇಕ್‌ಗಳು, ಬ್ರೆಡ್, ಡೋನಟ್, ಪಿಜ್ಜಾ ಸೇರಿದಂತೆ ಅನೇಕ ಬೇಕರಿ ಉತ್ಪನ್ನಗಳ ತಯಾರಿ
ಬೇಕರಿ ಉತ್ಪನ್ನಗಳ ಕೌಶಲ್ಯಾಭಿವೃದ್ಧಿ ತರಬೇತಿ


ಶಿವಮೊಗ್ಗ, 05 ಮಾರ್ಚ್ (ಹಿ.ಸ.):

ಆ್ಯಂಕರ್:ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಮಾ.12ರಿಂದ ಏಪ್ರಿಲ್ 10ರವರೆಗೆ ಒಂದು ತಿಂಗಳ ಬೇಕರಿ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗಿದೆ.

ಬಿಸ್ಕತ್ತು, ಕುಕೀಸ್, ವಿವಿಧ ಕೇಕ್‌ಗಳು, ಬ್ರೆಡ್, ಡೋನಟ್, ಪಿಜ್ಜಾ ಸೇರಿದಂತೆ ಅನೇಕ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಆಸಕ್ತರು ರೂ.4,500 ಶುಲ್ಕ ಪಾವತಿಸಿ ಮಾ.11ರೊಳಗಾಗಿ ಹೆಸರು ನೋಂದಾಯಿಸಬೇಕು. ತರಬೇತಿ ಅವಧಿಯಲ್ಲಿ ಊಟ-ವಸತಿ ಸೌಲಭ್ಯ ಇರುವುದಿಲ್ಲ.

ಹೆಚ್ಚಿನ ಮಾಹಿತಿಗೆ ಡಾ. ಜಯಶ್ರೀ (9449187763) ಮತ್ತು ಜಯಶಂಕರ (9686555897) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande