ದೇಶವಾಸಿಗಳಿಗೆ ಧನ್ತೇರಸ್ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ, 06 ನವೆಂಬರ್ (ಹಿ.ಸ.): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ಜನತೆಗೆ ಧನ್ತೇರಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಭಗವಾನ್ ಧನ್ವಂತರಿಯ ದಿವ್ಯ ಕೃಪೆಯಿಂದ ಎಲ್ಲರ ಜೀವನವೂ ಸುಖ, ಶಾಂತಿ ಮತ್
ಪ್ರಧಾನಮಂತ್ರಿ ಎಕ್ಸ್ ಪೋಸ್ಟ್


ನವದೆಹಲಿ, 06 ನವೆಂಬರ್ (ಹಿ.ಸ.):

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಸಮಸ್ತ ಜನತೆಗೆ ಧನ್ತೇರಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಭಗವಾನ್ ಧನ್ವಂತರಿಯ ದಿವ್ಯ ಕೃಪೆಯಿಂದ ಎಲ್ಲರ ಜೀವನವೂ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯದಿಂದ ಸದಾ ಬೆಳಗಲಿ. ಪ್ರತಿಯೊಂದು ಕುಟುಂಬದಲ್ಲೂ ಉತ್ಸಾಹ ಮತ್ತು ಸಂತೋಷದ ದೀಪ ನಿರಂತರವಾಗಿ ಬೆಳಗುತ್ತಿರಲಿ ಎಂದು ಹಾರೈಸಿದ್ದಾರೆ.

ಇದೇ ಸಂದರ್ಭದಲ್ಲಿ ಭಗವಾನ್ ಧನ್ವಂತರಿಯನ್ನು ಸ್ತುತಿಸುವ ಶ್ಲೋಕವನ್ನೂ ಹಂಚಿಕೊಂಡಿರುವ ಪ್ರಧಾನಿ, ದೇವತೆಗಳು ಮತ್ತು ಅಸುರರಿಂದ ಪೂಜಿಸಲ್ಪಡುವ ಆದಿದೇವ ಧನ್ವಂತರಿಯು ಲೋಕದ ಮುಪ್ಪು, ರೋಗ, ಭಯ ಮತ್ತು ಮೃತ್ಯುವನ್ನು ನಿವಾರಿಸುವವನು ಹಾಗೂ ವಿವಿಧ ಔಷಧಗಳ ದಾತನಾಗಿದ್ದಾನೆ ಎಂದು ಶ್ಲೋಕದ ಮೂಲಕ ಸ್ಮರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande