ಅಪಘಾತವೆಂದು ದಾಖಲಾಗಿದ್ದ ಪ್ರಕರಣದ ಹಿಂದೆ ವ್ಯವಸ್ಥಿತ ಕೊಲೆ ಪಿತೂರಿ
ವಿಜಯಪುರ, 19 ಅಕ್ಟೋಬರ್ (ಹಿ.ಸ.) ಸಾಮಾನ್ಯ ರಸ್ತೆ ಅಪಘಾತವೆಂದು ದಾಖಲಾಗಿದ್ದ ಪ್ರಕರಣವೊಂದನ್ನು ಸೂಕ್ಷ್ಮವಾಗಿ ತನಿಖೆ ನಡೆಸಿದ ವಿಜಯಪುರ ಸಂಚಾರಿ ಪೊಲೀಸರು, ಅದು ಅಪಘಾತವಲ್ಲ; ಪೂರ್ವಯೋಜಿತವಾಗಿ ನಡೆಸಿದ ಕೊಲೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ.123/
ಕೊಲೆ


ವಿಜಯಪುರ, 19 ಅಕ್ಟೋಬರ್ (ಹಿ.ಸ.)

ಸಾಮಾನ್ಯ ರಸ್ತೆ ಅಪಘಾತವೆಂದು ದಾಖಲಾಗಿದ್ದ ಪ್ರಕರಣವೊಂದನ್ನು ಸೂಕ್ಷ್ಮವಾಗಿ ತನಿಖೆ ನಡೆಸಿದ ವಿಜಯಪುರ ಸಂಚಾರಿ ಪೊಲೀಸರು, ಅದು ಅಪಘಾತವಲ್ಲ; ಪೂರ್ವಯೋಜಿತವಾಗಿ ನಡೆಸಿದ ಕೊಲೆ ಎಂಬುದನ್ನು ಪತ್ತೆಹಚ್ಚಿದ್ದಾರೆ.

ವಿಜಯಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಿ.ಆರ್. ನಂ.123/2026 ಅಡಿಯಲ್ಲಿ ರಸ್ತೆ ಅಪಘಾತ ಪ್ರಕರಣವೆಂದು ದಾಖಲಾಗಿದ್ದ ಘಟನೆಯ ಸ್ಥಳ ಹಾಗೂ ಸನ್ನಿವೇಶಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಪೊಲೀಸರಿಗೆ ಹಲವು ಅನುಮಾನಗಳು ಮೂಡಿದ್ದವು. ಪ್ರಕರಣದ ಸ್ವರೂಪದ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆಯನ್ನು ವಿಜಯಪುರ ನಗರ ಡಿ.ಎಸ್.ಪಿ. ಅವರಿಗೆ ವಹಿಸಲಾಗಿತ್ತು.

ಪ್ರಕರಣವನ್ನು ವಹಿಸಿಕೊಂಡ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಸೂಕ್ಷ್ಮ ಹಾಗೂ ಆಳವಾದ ತನಿಖೆ ಕೈಗೊಂಡರು. ಘಟನೆಯ ಸ್ಥಳದ ಪರಿಶೀಲನೆ, ಲಭ್ಯವಿದ್ದ ಸಾಕ್ಷ್ಯಾಧಾರಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಪರಿಶೀಲಿಸಿದಾಗ, ಆರಂಭದಲ್ಲಿ ಕಂಡುಬಂದಿದ್ದ ರಸ್ತೆ ಅಪಘಾತದ ಚಿತ್ರಣಕ್ಕೂ ವಾಸ್ತವಾಂಶಕ್ಕೂ ವ್ಯತ್ಯಾಸವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹೆಚ್ಚಿನ ತನಿಖೆ ಮುಂದುವರಿಸಿದ ಪೊಲೀಸರು, ಘಟನೆ ಹಿಂದೆ ಪೂರ್ವಯೋಜಿತ ಕೃತ್ಯದ ಶಂಕೆ ಇರುವುದನ್ನು ದೃಢಪಡಿಸಿಕೊಂಡು ಪ್ರಕರಣವನ್ನು ಕೊಲೆ ಪ್ರಕರಣದ ಆಯಾಮದಲ್ಲಿ ತನಿಖೆ ನಡೆಸಿದರು. ಈ ವೇಳೆ ಇದು ಅಪಘಾತವಲ್ಲ, ಯೋಜಿತವಾಗಿ ನಡೆಸಿದ ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಪ್ರಮುಖ ಆರೋಪಿಗಳ ಬಂಧನ:

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದರೆಂದು ಗುರುತಿಸಲಾದ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.

ಅಲ್ಲದೇ, ಕೃತ್ಯಕ್ಕೆ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿರುವ ವಾಹನವನ್ನೂ ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದ ಹಿನ್ನೆಲೆ, ಆರೋಪಿಗಳ ಪಾತ್ರ ಹಾಗೂ ಕೃತ್ಯದ ಉದ್ದೇಶ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ತನಿಖಾ ತಂಡಕ್ಕೆ ಎಸ್ಪಿ ಶ್ಲಾಘನೆ

ಅಪಘಾತವೆಂದು ದಾಖಲಾಗಿದ್ದ ಪ್ರಕರಣದ ನೈಜ ಸ್ವರೂಪವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಶ್ಲಾಘಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿ, ಅವರ ಕರ್ತವ್ಯನಿಷ್ಠೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ಅಪಘಾತದ ಪ್ರಕರಣವೆಂದು ದಾಖಲಾಗಿದ್ದ ಘಟನೆಯೊಂದನ್ನು ವಿವಿಧ ಆಯಾಮಗಳಲ್ಲಿ ಪರಿಶೀಲಿಸಿ, ಅದರ ಹಿಂದೆ ನಡೆದಿದ್ದ ಕೃತ್ಯದ ನೈಜ ಸ್ವರೂಪವನ್ನು ಬಯಲಿಗೆಳೆದಿರುವುದು ವಿಜಯಪುರ ಪೊಲೀಸರ ತನಿಖಾ ಕಾರ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande