ದಾವಣಗೆರೆಯನ್ನು ತಂತ್ರಜ್ಞಾನ ಮತ್ತು ನವೋದ್ಯಮಗಳ ಕೇಂದ್ರವನ್ನಾಗಿಸಲು ಕ್ರಮ:ಸಂಸದೆ ಪ್ರಭಾ ಮಲ್ಲಿಕಾರ್ಜುನ
ದಾವಣಗೆರೆ, 19 ಅಕ್ಟೋಬರ್ (ಹಿ.ಸ.): ದಾವಣಗೆರೆಯನ್ನು ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ಆಧಾರಿತ ಉದ್ಯಮಗಳು, ನವೋದ್ಯಮಗಳು ಹಾಗೂ ಕೈಗಾರಿಕಾ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ‘ವಿಷನ್ ದಾವಣಗೆರೆ’ ಪರಿಕಲ್ಪನೆಯಡಿ ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಕಾಲೇಜಿನಲ್ಲಿ ಆ
ಸಂವಾದ ಕಾರ್ಯಕ್ರಮ


ದಾವಣಗೆರೆ, 19 ಅಕ್ಟೋಬರ್ (ಹಿ.ಸ.):

ದಾವಣಗೆರೆಯನ್ನು ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ಆಧಾರಿತ ಉದ್ಯಮಗಳು, ನವೋದ್ಯಮಗಳು ಹಾಗೂ ಕೈಗಾರಿಕಾ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ‘ವಿಷನ್ ದಾವಣಗೆರೆ’ ಪರಿಕಲ್ಪನೆಯಡಿ ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯ ಕಾಲೇಜಿನಲ್ಲಿ ಆಯೋಜಿಸಿದ್ದ ನವೋದ್ಯಮಗಳ ಪ್ರಸ್ತುತಿ ಕಾರ್ಯಕ್ರಮಕ್ಕೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿ, ನವೋದ್ಯಮಿಗಳೊಂದಿಗೆ ಸಂವಾದ ನಡೆಸಿದರು.

ವಿಷನ್ ದಾವಣಗೆರೆ’, ಕರ್ನಾಟಕ ಡಿಜಿಟಲ್ ಆರ್ಥಿಕತೆ ಅಭಿಯಾನ ಹಾಗೂ ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸ್ಥಳೀಯ ನವೋದ್ಯಮಿಗಳು ತಮ್ಮ ನವೀನ ಆವಿಷ್ಕಾರಗಳು, ತಂತ್ರಜ್ಞಾನ ಆಧಾರಿತ ಉತ್ಪನ್ನಗಳು ಹಾಗೂ ಉದ್ಯಮದ ಪರಿಕಲ್ಪನೆಗಳನ್ನು ತಜ್ಞರ ಮುಂದೆ ಪ್ರಸ್ತುತಪಡಿಸಲು ಈ ಕಾರ್ಯಕ್ರಮ ವೇದಿಕೆಯಾಯಿತು. ಹೊಸ ಉದ್ಯಮಗಳಿಗೆ ಉತ್ತೇಜನ ನೀಡುವುದು ಮತ್ತು ದಾವಣಗೆರೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯಮಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ.

ಕಾರ್ಯಕ್ರಮದಲ್ಲಿ ಆಯ್ಕೆಯಾಗುವ ನವೋದ್ಯಮಿಗಳಿಗೆ ನವೆಂಬರ್‌ನಲ್ಲಿ ನಡೆಯಲಿರುವ ‘ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2026’ರಲ್ಲಿ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಉಚಿತ ಪ್ರದರ್ಶನ ಮಳಿಗೆಗಳನ್ನು ಒದಗಿಸಲು ಯೋಜಿಸಲಾಗಿದೆ.

ಇದರಿಂದ ನವೋದ್ಯಮಿಗಳಿಗೆ ಹೂಡಿಕೆದಾರರು, ಉದ್ಯಮ ತಜ್ಞರು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸಲು ಅವಕಾಶ ದೊರೆಯಲಿದೆ. ಈ ಮೂಲಕ ಸ್ಥಳೀಯ ನವೋದ್ಯಮಗಳಿಗೆ ಹೆಚ್ಚಿನ ಮನ್ನಣೆ ದೊರೆಯುವುದರ ಜತೆಗೆ, ದಾವಣಗೆರೆಯನ್ನು ತಂತ್ರಜ್ಞಾನ ಮತ್ತು ಕೈಗಾರಿಕಾ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ಬೆಳೆಸುವ ಪ್ರಯತ್ನಕ್ಕೆ ಬಲ ಸಿಗಲಿದೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande