



ರಾಯಚೂರು, 04 ಜನವರಿ (ಹಿ.ಸ.) :
ಆ್ಯಂಕರ್ : ರಾಯಚೂರು ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆಯಂತೆ ನಾವು ಈ ಬಾರಿ ರಾಯಚೂರು ಉತ್ಸವ ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ಪ್ರತಿಯೊಂದು ಸಂಘ-ಸಂಸ್ಥೆಗಳು, ಎಲ್ಲ ಶಾಲಾ ಕಾಲೇಜುಗಳು, ಇನ್ನೀತರ ಎಲ್ಲರೂ ಈ ಉತ್ಸವದಲ್ಲಿ ಸಕ್ರಿಯ ಭಾಗಿಯಾಗಿ ಉತ್ಸವ ಯಶಗೊಳಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಕೋರಿದರು.
ರಾಯಚೂರು ಉತ್ಸವದ ಪ್ರಚಾರಾರ್ಥ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಚಿವರಾದ ಎನ್ ಎಸ್ ಬೋಸರಾಜು ಅವರು ಮಾತನಾಡಿ, ಬಹಳ ವರ್ಷಗಳ ನಂತರ ನಾವು ರಾಯಚೂರು ಜನತೆಗೆ ರಾಯಚೂರು ಉತ್ಸವದ ಕೊಡುಗೆ ನೀಡುತ್ತಿದ್ದೇವೆ. ಪತ್ರಿಕೆಗಳು ಸಹ ವಿಶೇಷ ವರದಿ ಪ್ರಕಟಿಸಿ ಉತ್ಸವ ಆಗಬೇಕು ಎಂದು ಒತ್ತಾಯ ಮಾಡಿವೆ. ವಿದ್ಯುನ್ಮಾನ ಮಾಧ್ಯಮದವರು ಉತ್ಸವ ಮಾಡಿ ಎಂದು ಸಲಹೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಜನತೆಯ ಬೇಡಿಕೆಯನುಸಾರ ಉತ್ಸವ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಡಾ.ಎಸ್ ಶಿವರಾಜ ಪಾಟೀಲ ಮಾತನಾಡಿ, ಸಾರ್ವಜನಿಕರ ಸಹಭಾಗೀತ್ವ ಇದ್ದಾಗ ಮಾತ್ರ ಉತ್ಸವ ಯಶಗೊಳ್ಳಲು ಸಾಧ್ಯ. ಹಾಗಾಗಿ ಉತ್ಸವದ ಬಗ್ಗೆ ವಿಶೇಷ ಪ್ರಚಾರ ನಡೆಯಬೇಕು ಎಂದರು.
ಉತ್ಸವ ನಿಮಿತ್ತ ಹಮ್ಮಿಕೊಂಡ ಈ ಕ್ರೀಡಾ ಉತ್ಸವದಲ್ಲಿ ಸ್ಥಳೀಯ ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕರು ಸಲಹೆ ಮಾಡಿದರು.
ಸಮಾರಂಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಎ. ವಸಂತಕುಮಾರ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಾದ ಅರಣಾಂಕ್ಷು ಗಿರಿ, ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಮುಖಂಡರಾದ ಪವನ್ ಕಿಶೋರ ಪಾಟೀಲ, ಡಾ.ರಝಾಕ್ ಉಸ್ತಾದ್, ಪಾಲಿಕೆಯ ಉಪ ಆಯುಕ್ತರಾದ ಸಂತೋಷರಾಣಿ, ತಹಸೀಲ್ದಾರರಾದ ಸುರೇಶ ವರ್ಮಾ, ಅಮರೇಶ ಬಿರಾದಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ ನಾಯಕ ಹಾಗೂ ಇತರರು ಇದ್ದರು. ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ ಸ್ವಾಗತಿಸಿದರು.
ಮೊದಲನೇ ಪಂದ್ಯಕ್ಕೆ ಚಾಲನೆ: ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ಮಹಾನಗರ ಪಾಲಿಕೆಯ ತಂಡ ಹಾಗೂ ಶಿಕ್ಷಣ ಇಲಾಖೆಯ ತಂಡದ ಮಧ್ಯೆ ಮೊದಲನೇ ಪಂದ್ಯಾರಂಭಕ್ಕೆ ಸಚಿವರು ಮತ್ತು ಶಾಸಕರು ಜನವರಿ 04ರಂದು ಚಾಲನೆ ನೀಡಿದರು.
ಕ್ರೀಡೋತ್ಸವದಲ್ಲಿ ಸಚಿವರು ಮತ್ತು ಶಾಸಕರು ಕ್ರಿಕೆಟ್ ಬ್ಯಾಟ್ ಬೀಸಿ ಮತ್ತು ಬಾಲ್ ಹಾಕಿ ಪಂದ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್