
ಗದಗ, 06 ಜನವರಿ (ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ದೀರ್ಘಾವದಿ ಅಡಳಿತ ನಡೆಸಿ ದಾಖಲೆ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಗದಗ ನಗರದದ ನಗರದ ಕಳಸಾಪೂರ ರಸ್ತೆಯಲ್ಲಿರುವ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹಾತಲಗೇರಿ ನಾಕಾದಲ್ಲಿರುವ ಭಕ್ತಶ್ರೀ ಕನಕದಾಸ ವೃತ್ತದಲ್ಲಿ, ಸ್ಟೇಷನ್ ರಸ್ತೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹಾಗೂ ಕಳಸಾಪೂರ ರಸ್ತೆಯಲ್ಲಿರುವ ಶ್ರೀ ರಾಕೇಶ ಸಿದ್ದರಾಮಯ್ಯ ಐಟಿಐ ಕಾಲೇಜಿನಲ್ಲಿ ಅಪಾರ ಅಭಿಮಾನಿಗಳಿಂದ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಲಾಯಿತು. ದಂಡಪ್ಪ ಮಾನ್ವಿ ಹೆರಿಗೆ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಮದ್ಯಾಹ್ನ ಶ್ರೀ ಅನ್ನಪೂಣೇಶ್ವರಿ ಪ್ರಸಾದ ನಿಲಯದಲ್ಲಿ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್. ಆರ್. ರೊಳ್ಳಿ, ವಿ.ವೈ. ಮಕ್ಕಣ್ಣವರ, ನಾಗಪ್ಪ ಗುಗ್ಗರಿ, ಡಾ. ಎಸ್. ಎ. ಜಕಬಾಳ, ಡಾ. ಶರಣಬಸವ ವೆಂಕಟಾಪೂರ, ಪೆÇ್ರೀ. ಬಿ. ಎಸ್. ಕಂಠಿ, ಶ್ರೀಮತಿ ಚೆನ್ನಮ್ಮ ಹುಳಕಣ್ಣವರ, ಹುಚ್ಚಣ್ಣ ಶಹಪೂರ, ಬಿ. ಬಿ. ಭಾವಿಕಟ್ಟಿ, ಎಸ್. ಎಸ್. ಕರಡಿ, ಕೆ. ಬಿ. ಕಂಬಳಿ, ಉಮೇಶ ಹಡಪದ, ಸುಭಾಷ ಪರಸನಾಯ್ಕರ್, ಶಿವಣ್ಣ ಶಿಂಗಟಾಲಕೇರಿ, ಯಲ್ಲಪ್ಪ ಗುರಿಕಾರ, ಬಸವರಾಜ ಮಡ್ಡಿ ಸೇರಿದಂತೆ ಹಾಗೂ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP