
ಕೋಲಾರ, ೦೬ ಜನವರಿ (ಹಿ.ಸ) :
ಆ್ಯಂಕರ್ : ಕೋಲಾರದಲ್ಲಿ ಜ.೩೧ ರಂದು ಹಿಂದೂ ಸಮಾಜೋತ್ಸವ ನಡೆಸಲು ಸಿದ್ದತೆ ನಡೆಸಿರುವ ಹಿಂದೂ ಸಮಾಜೋತ್ಸವ ಸಮಿತಿವತಿಯಿಂದ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ನಂತರ ದೇವಾಲಯದ ಆವರಣದಲ್ಲಿ ಭಿತ್ತಿಪತ್ರ, ಸ್ಟಿಕ್ಕರ್‌ಗಳನ್ನು ಸಂಸದ ಎಂ.ಮಲ್ಲೇಶಬಾಬು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜೋತ್ಸವದ ಮೂಲಕ ಇಡೀಸಮಾಜವನ್ನು ಒಗ್ಗೂಡಿಸುವ ಕೆಲಸವಾಗಲಿದೆ, ನಮ್ಮ ಸಂಸ್ಕೃತಿ, ಸಂಪ್ರದಾಯ, ಸನಾತನ ಧರ್ಮದ ಧ್ಯೇಯವನ್ನು ಉಳಿಸಿಕೊಂಡು ಹೋಗುವ ಪ್ರಯತ್ನವಾಗಲಿದೆ. ಹಿಂದೂಗಳು ಜಾತಿಯ ವಿಷವರ್ತುಲದಿಂದ ಹೊರಬರಬೇಕು, ನಾವೆಲ್ಲಾ ಒಂದು ನಾವೆಲ್ಲಾ ಹಿಂದೂ ಎಂಬ ಒಂದೇ ಧ್ಯೇಯವಾಕ್ಯವಾಗಬೇಕು ಎಂದ ಅವರು, ಈ ಸಮಾಜೋತ್ಸವದಲ್ಲಿ ಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಪಾಲ್ಗೊಳ್ಳಬೇಕು ಎಂದು ಕೋರಿದರು.
ಸಮಾಜೋತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಲು ನಗರದೇವತೆ ಕೋಲಾರಮ್ಮನ ಆಶೀರ್ವಾದ ಪಡೆದಿದ್ದೇವೆ, ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು, ಕಾರ್ಯಕ್ರಮ ಹಿಂದೂ ಸಮಾಜದ ಒಗ್ಗಟ್ಟಿನ ಪ್ರದರ್ಶನವಾಗಲಿ, ಸಮಾಜಕ್ಕೆ ಶಾಂತಿ, ಸಹಬಾಳ್ವೆಯ ಸಂದೇಶ ಸಾರಲಿ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಮುಖಂಡ ಡಾ.ಶಂಕರ್ ನಾಯಕ್ ಮಾತನಾಡಿ, ಹಿಂದೂ ಸಮಾಜವನ್ನು ಒಗ್ಗೂಡಿಸುವ ಮತ್ತು ಒಂದಾಗಿ ಕರೆದೊಯ್ಯುವ ಪ್ರಯತ್ನವೇ ಈ ಸಮಾಜೋತ್ಸವವಾಗಿದೆ, ಇಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಾಲ್ಗೊಳ್ಳೋಣ ಎಂದು ಕೋರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿಚಲಪತಿ ಮಾತನಾಡಿ, ಹಿಂದೂ ಸಮಾಜೋತ್ಸವದ ಮೂಲಕ ಯುವಕರನ್ನು ಒಗ್ಗೂಡಿಸುವ ಕೆಲಸವಾಗಲಿ, ಹಿಂದೂ ಧರ್ಮದ ಸಿದ್ದಾಂತ ಶಾಂತಿ ಸಹಬಾಳ್ವೆಯ ಪರವಿದ್ದು, ಅದು ಉಳಿಯಬೇಕು, ನಾವೆಲ್ಲಾ ಒಗ್ಗಟ್ಟಿನಿಂದ ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಉಪಾಧ್ಯಕ್ಷ ಡಾ.ಜನಾರ್ಧನ್, ಬಜರಂಗದಳ ಮುಖಂಡ ಬಾಲಾಜಿ, ಬಾಬು, ಅಪ್ಪಿ, ಸತ್ಯನಾರಾಯಣ ಜ್ಯುವೆರ‍್ಸ್ನ ವೆಂಕಟೇಶ್, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಜಗದೀಶ್ವರಾಚಾರಿ,ಅರುಣಮ್ಮ, ಪ್ರಕಾಶ್, ಆರ್‌ಎಸ್‌ಎಸ್‌ನ ಪ್ರಶಾಂತ್ ಜೀ, ಸುರೇಶ್, ಮಂಜುಳಮ್ಮ, ನಾಗ, ರವಿ, ರಮೇಶ್ ರಾಜ್, ಅಡಿಕೆ ನಾಗ, ಬಂ.ಪ್ರಕಾಶ್, ನಾಮಲ ಮಂಜು, ಬಿಜೆಪಿ ಬಾಲಾಜಿ ಮತ್ತಿತರರಿದ್ದರು.
ಚಿತ್ರ ; ಕೋಲಾರದಲ್ಲಿ ಜ.೩೧ ರಂದು ಹಿಂದೂ ಸಮಾಜೋತ್ಸವ ನಡೆಸಲು ಸಿದ್ದತೆ ನಡೆಸಿರುವ ಹಿಂದೂ ಸಮಾಜೋತ್ಸವ ಸಮಿತಿವತಿಯಿಂದ ನಗರದ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿದ ನಂತರ ದೇವಾಲಯದ ಆವರಣದಲ್ಲಿ ಭಿತ್ತಿಪತ್ರವನ್ನು ಸಂಸದ ಎಂ.ಮಲ್ಲೇಶಬಾಬು ಬಿಡುಗಡೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್