ಗವಿಸಿದ್ಧೇಶ್ವರ ಮಹಾರಥೋತ್ಸವ ; ಬಾಳೆಹಣ್ಣು ಎಸೆಯದಿರಲು ಸದ್ಭಕ್ತರಲ್ಲಿ ಮನವಿ
ಕೊಪ್ಪಳ, 04 ಜನವರಿ (ಹಿ.ಸ.) : ಆ್ಯಂಕರ್ : ಶ್ರೀ ಗವಿಮಠದಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಾಳೆ ನಡಯುವ ಮಹಾರಥೋತ್ಸವ ಸಾಗುವ ಸಂಧರ್ಭದಲ್ಲಿ ಭಕ್ತರು ತಮ್ಮ ಭಕ್ತಿಯಿಂದ ಉತ್ತತ್ತಿ ಮಹಾರಥೋತ್ಸವಕ್ಕೆ ಅರ್ಪಿಸುವುದು ಸಂಪ್ರದಾಯ. ಆದರೆ ಬಾಳೆಹಣ್ಣನ್ನು ಎಸೆಯುವುದು ಜಾಸ್ತಿ ಆಗಿದ್ದು, ಅ
ಗವಿಸಿದ್ಧೇಶ್ವರ ಮಹಾರಥೋತ್ಸವ ; ಬಾಳೆಹಣ್ಣು ಎಸೆಯದಿರಲು ಸದ್ಭಕ್ತರಲ್ಲಿ ಮನವಿ


ಕೊಪ್ಪಳ, 04 ಜನವರಿ (ಹಿ.ಸ.) :

ಆ್ಯಂಕರ್ : ಶ್ರೀ ಗವಿಮಠದಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಾಳೆ ನಡಯುವ ಮಹಾರಥೋತ್ಸವ ಸಾಗುವ ಸಂಧರ್ಭದಲ್ಲಿ ಭಕ್ತರು ತಮ್ಮ ಭಕ್ತಿಯಿಂದ ಉತ್ತತ್ತಿ ಮಹಾರಥೋತ್ಸವಕ್ಕೆ ಅರ್ಪಿಸುವುದು ಸಂಪ್ರದಾಯ.

ಆದರೆ ಬಾಳೆಹಣ್ಣನ್ನು ಎಸೆಯುವುದು ಜಾಸ್ತಿ ಆಗಿದ್ದು, ಅದರಿಂದ ಜಾತ್ರಾ ಆವರಣದಲ್ಲಿನ ಮಕ್ಕಳು, ಮಹಿಳೆಯರು, ವೃದ್ಧರು, ಭಕ್ತರು ಕಾಲು ಜಾರಿ ಬೀಳುವ ಸಂದರ್ಭವಿರುತ್ತವೆ. ಅಲ್ಲದೆ ಶ್ರೀಮಠದ ಆವರಣದಲ್ಲಿಯೂ ಸ್ವಚ್ಚತೆ ಕಾಪಾಡಲು ತೊಂದರೆಯಾಗುವುದು, ಆದಕಾರಣ ಮುನ್ನಚ್ಚೆರಿಕೆಯ ಕ್ರಮವಾಗಿ ಸಧ್ಭಕ್ತಾಧಿಗಳು ಬಾಳೆಹಣ್ಣು ರಥೋತ್ಸವಕ್ಕೆ ಎಸೆಯಬಾರದೆಂದು ಹಾಗೂ ಬಾಳೆಹಣ್ಣನ್ನು ಮಾರಾಟ ಮಾಡುವವರು ಸಹ ಶ್ರೀ ಮಹಾರಥೋತ್ಸವ ನಡೆಯುವ ಆವರಣದಲ್ಲಿ ಬಾಳೆಹಣ್ಣನ್ನು ಮಾರಾಟ ಮಾಡಬಾರದೆಂದು ಗವಿಮಠದ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande