
ಗದಗ, 04 ಜನವರಿ (ಹಿ.ಸ.) :
ಆ್ಯಂಕರ್ : ವಿಕಲಚೇತನರ ಪಾಸ್ ಹೊಂದಿರುವ ಆಭ್ಯರ್ಥಿಗಳು ತಮ್ಮ ಪಾಸಿನ ಅವಧಿಯ ದಿ;31-12-2025 ರವರೆಗೆ ಮಾನ್ಯತೆ ಇದ್ದದನ್ನು ಫೆಬ್ರುವರಿ 28 ರವರೆಗೆ ಮಾನ್ಯತೆ ಇರುತ್ತದೆ. ಆಯಾ ತಾಲ್ಲೂಕುವಾರು ಸಂಬಂಧಿಸಿದ ಘಟಕಗಳಲ್ಲಿ ವಿಕಲಚೇತನ ಪಾಸುಗಳನ್ನು ದಿನಾಂಕ 05-01-2026 ರಿಂದ ನವೀಕರಿಸಲಾಗುತ್ತದೆ.
ವಿಕಲಚೇತನ ಪಾಸ್ ಹೊಂದಿರುವ ಅಭ್ಯರ್ಥಿಗಳು “ಸೇವಾಸಿಂದು” ಪೋರ್ಟಲ್ ಮೂಖಾಂತರ ಅರ್ಜಿ ಸಲ್ಲಿಸಿ ನಂತರ ಎಲ್ಲಾ ತಮ್ಮ ಮೂಲದಾಖಲಾತಿಗಳ ಝರಾಕ್ಸ ಪ್ರತಿಗಳೊಂದಿಗೆ ಹಳೇಪಾಸನ್ನು ವಾಪಸ ನೀಡಿ ನವೀಕರಿಸಲು ನಿಗದಿಪಡಿಸಿದ ನಗದು ಹಣ ರೂ.660 ಹಾಗೂ 2 ಭಾವಚಿತ್ರಗಳೊಂದಿಗೆ ಸಂಬಂಧಪಟ್ಟ ತಾಲ್ಲೂಕುವಾರು ಘಟಕಗಳ ಬಸ್ ನಿಲ್ದಾಣದಲ್ಲಿ ಹೊಸ ಪಾಸನ್ನು ಪಡೆಯಬಹುದು.
ಆದೇ ರೀತಿ ಹೊಸ ಪಾಸುಗಳನ್ನು ಪಡೆಯಲು ಗದಗವಿಭಾಗೀಯ ಕಚೇಯಲ್ಲಿ ಪಡೆಯಲು ವಾಕರಸಾಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP