
ವಿಜಯಪುರ, 04 ಜನವರಿ (ಹಿ.ಸ.) :
ಆ್ಯಂಕರ್ : ಸೋಮವಾರ ಜನೇವರಿ 5 ರಿಂದ ವಿಜಯಪುರ ನಗರದಿಂದ ಇಟ್ಟಂಗಿಹಾಳ- ಧನರ್ಗಿ ಮಾರ್ಗವಾಗಿ ತಿಕೋಟಾ ವರೆಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೂತನ ಬಸ್ ಸಂಚಾರ ಪ್ರಾರಂಭಿಸಲಿದೆ.
ವಿದ್ಯಾರ್ಥಿಗಳು, ರೈತರು ಕಾರ್ಮಿಕರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಹೊಸ ಬಸ್ ಸೇವೆ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಸ್ ಸೇವೆ ಪ್ರಾರಂಭಿಸಲಾಗುತ್ತಿದೆ.
ಪ್ರತಿದಿನ ಒಂದು ಬಸ್ಸು ವಿಜಯಪುರದಿಂದ ಇಟ್ಡಂಗಿಹಾಳ, ಲೋಹಗಾಂವ, ಧನರ್ಗಿ, ಸಿದ್ದಾಪುರ ಕೆ., ಮಲಕನದೇವರಹಟ್ಟಿ, ಸೋಮದೇವರಹಟ್ಟಿ ಮಾರ್ಗವಾಗಿ ತಿಕೋಟಾಕ್ಕೆ ಸಂಚರಿಸಲಿದೆ. ಅಲ್ಲದೇ, ಈ ಮಾರ್ಗದಲ್ಲಿ ಬರುವ ತಾಂಡಾಗಳು ಹಾಗೂ ವಸ್ತಿಗಳಿಗೂ ನಿಲುಗಡೆ ನೀಡಲಾಗಿದೆ.
ಅಲ್ಲದೇ, ಈ ಬಸ್ಸು ತಿಕೋಟಾದಿಂದ ಹೊರಟು ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಸಿದ್ದಾಪುರ ಕೆ., ಧನರ್ಗಿ, ಲೋಹಗಾಂವ, ಇಟ್ಟಂಗಿಹಾಳ ಮಾರ್ಗವಾಗಿ ವಿಜಯಪುರಕ್ಕೆ ಸಂಚರಿಸಲಿದೆ. ಅಲ್ಲದೇ, ಈ ಮಾರ್ಗದಲ್ಲಿ ಬರುವ ತಾಂಡಾಗಳು ಮತ್ತು ವಸ್ತಿಗಳ ನಿಲುಗಡೆ ಕಲ್ಪಿಸಲಾಗಿದೆ.
ಪ್ರತಿದಿನ ತಲಾ ನಾಲ್ಕು ಬಾರಿ ಈ ಮಾರ್ಗವಾಗಿ ಬಸ್ಸು ವಿಜಯಪುರದಿಂದ ತಿಕೋಟಾ ಮತ್ತು ತಿಕೋಟಾದಿಂದ ವಿಜಯಪುರಕ್ಕೆ ಸಂಚರಿಸಲಿದೆ.
ಸೋಮವಾರ ಬೆಳಿಗ್ಗೆ 10 ಗಂಟೆಗೆ ಲೋಹಗಾಂವ ಗ್ರಾಮದಲ್ಲಿ ಈ ಬಸ್ಸು ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande