ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
ಧಾರವಾಡ, 04 ಜನವರಿ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲಾ ಪೋಲಿಸ್ ಇಲಾಖೆಯಿಂದ ಜನೆವರಿ 12, 2026 ರಿಂದ ಜನೆವರಿ 18, 2026 ರವರೆಗೆ ಬೆಳಿಗ್ಗೆ 6:30 ಗಂಟೆಯಿಂದ 9 ಗಂಟೆಯವರೆಗೆ ಧಾರವಾಡ ಪೋಲಿಸ್ ಕವಾಯತು ಮೈದಾನ ಡಿ.ಎ.ಆರ್ ಘಟಕದಲ್ಲಿ ನಾಗರಿಕ ಬಂದೂಕು ತರಬೇತಿಯನ್ನು ಆಯೋಜಿಸಲಾಗಿದೆ. ನಾಗರಿಕ ಬಂದೂಕು
ನಾಗರಿಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ


ಧಾರವಾಡ, 04 ಜನವರಿ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲಾ ಪೋಲಿಸ್ ಇಲಾಖೆಯಿಂದ ಜನೆವರಿ 12, 2026 ರಿಂದ ಜನೆವರಿ 18, 2026 ರವರೆಗೆ ಬೆಳಿಗ್ಗೆ 6:30 ಗಂಟೆಯಿಂದ 9 ಗಂಟೆಯವರೆಗೆ ಧಾರವಾಡ ಪೋಲಿಸ್ ಕವಾಯತು ಮೈದಾನ ಡಿ.ಎ.ಆರ್ ಘಟಕದಲ್ಲಿ ನಾಗರಿಕ ಬಂದೂಕು ತರಬೇತಿಯನ್ನು ಆಯೋಜಿಸಲಾಗಿದೆ.

ನಾಗರಿಕ ಬಂದೂಕು ತರಬೇತಿಯನ್ನು ಪಡೆಯಲು ಇಚ್ಛಿಸುವ, ಧಾರವಾಡ ಜಿಲ್ಲಾ ವ್ಯಾಪ್ತಿಯ ನಾಗರಿಕರು ತಮ್ಮ ವ್ಯಾಪ್ತಿಯ ಪೋಲಿಸ್ ಠಾಣೆಗಳನ್ನು ಅಥವಾ ಜಿಲ್ಲಾ ಆಯುಧಗಾರರು. ಡಿ.ಎ.ಆರ್. ಧಾರವಾಡ (ವೈ.ಎಂ. ಕಡೇಮನಿ, ಮೊ.ಸಂ: 872252206) ಅವರನ್ನು ಸಂಪರ್ಕಿಸಬಹುದು.

ನಿಗಧಿತ ನಮೂನೆಯಲ್ಲಿ ವಿವರಗಳನ್ನು ತುಂಬಿ, ಇತ್ತೀಚಿನ 03 ಪಾಸ್ ಪೋರ್ಟ್ ಸೈಜ್ ಪೋಟೋ, ಆಧಾರ ಕಾರ್ಡ ಪ್ರತಿಯೊಂದಿಗೆ ಜನೆವರಿ 09, 2026 ರೊಳಗೆ ಪೋಲಿಸ್ ಠಾಣೆಗೆ ಸಲ್ಲಿಸುವುದು ಹಾಗೂ ನಾಗರಿಕ ಬಂದೂಕು ತರಬೇತಿಗೆ ತಗಲುವ ವೆಚ್ಚವನ್ನು ಅರ್ಜಿದಾರರಿಂದ ಡಿ.ಎ.ಆರ್. ಘಟಕದಲ್ಲಿ ನಗದು ರೂಪದಲ್ಲಿ ಪಡೆದುಕೊಂಡು ಒಟ್ಟು 07 ದಿನಗಳ ತರಬೇತಿಯನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ನಾಗರಿಕ ಬಂದೂಕು ತರಬೇತಿಯ ಷರತ್ತುಗಳಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ಪೋಲಿಸ್ ಠಾಣೆಗಳನ್ನು ಅಥವಾ ಡಿ.ಎ.ಆರ್. ಕೇಂದ್ರ ಕಛೇರಿಯನ್ನು ಸಂಪರ್ಕಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande