ಆಯುಷ್ ಹಬ್ಬದ ಪೋಸ್ಟರ್ ಬಿಡುಗಡೆ
ಮಂಗಳೂರು, 04 ಜನವರಿ (ಹಿ.ಸ.) : ಆ್ಯಂಕರ್ : ಜನವರಿ 31 ಮತ್ತು ಫೆಬ್ರವರಿ 1 ರಂದು ಮಂಗಳೂರು ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ಆಯುಷ್ ಹಬ್ಬ 2026 ನಡೆಯಲಿದ್ದು, ಈ ಹಿನ್ನೆಲೆ ಇಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ ಪೋಸ್ಟರ್ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಆಯುಷ್ ಹಬ್
Poster


ಮಂಗಳೂರು, 04 ಜನವರಿ (ಹಿ.ಸ.) :

ಆ್ಯಂಕರ್ : ಜನವರಿ 31 ಮತ್ತು ಫೆಬ್ರವರಿ 1 ರಂದು ಮಂಗಳೂರು ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ಆಯುಷ್ ಹಬ್ಬ 2026 ನಡೆಯಲಿದ್ದು, ಈ ಹಿನ್ನೆಲೆ ಇಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ ಪೋಸ್ಟರ್ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಆಯುಷ್ ಹಬ್ಬಗಳಿಂದ ಈ ವೈದ್ಯಕೀಯ ಪದ್ಧತಿಯನ್ನು ಜನರಿಗೆ ಅರ್ಥ ಮಾಡಿಸಲಿದೆ,ಇದರಿಂದ ಜನಜಾಗೃತಿ ನಡೆಯಲಿದೆ. ಹೆಚ್ಚಿನ ಜನರು ಈ ಹಬ್ಬದಲ್ಲಿ ಭಾಗಿಯಾಗಿ ಆಯುಷ್ ಪದ್ದತಿಯ‌ ಪ್ರಯೋಜನ ಪಡೆಯುವ ವಿಶ್ವಾಸ ನನಗೆ ಇದೆ. ಆಯುಷ್ ವೈದ್ಯಕೀಯ ಪದ್ಧತಿಗೂ ಅದರದೇ ಆದ ಮಹತ್ವವಿದೆ ಎಂದರು.

ಪದ್ಧತಿಗಿಂತ ರೋಗಿಗಳು‌ ಮುಖ್ಯ ಅವರಿಗೆ ಬೇಕಾದ ಪದ್ಧತಿಯಲ್ಲಿ‌ ಚಿಕಿತ್ಸೆ ಒದಗಿಸಬೇಕು.ಆಯುಷ್ ಹಬ್ಬದ ಮೂಲಕ‌ ಕರಾವಳಿಗೆ ರಾಷ್ಟ್ರಮಟ್ಟದಲ್ಲಿ ಗೌರವ ಸಿಗಲಿದೆ. ಎಲ್ಲರೂ ಈ ಆಯುಷ್ ಹಬ್ಬವನ್ನು‌ಪ್ರೋತ್ಸಾಹಿಸಬೇಕು, ಹೆಚ್ಚಿನ‌ ಜನರು ಭಾಗಿಯಾಗಬೇಕು,

ರೋಗ ಬಂದ ಮೇಲೆ ಆಸ್ಪತ್ರೆಗೆ ಹೋಗುವ ಬದಲು ರೋಗ ಬರದಂತೆ ಮುನ್ನೆಚ್ವರಿಕೆ ತೆಗೆದುಕೊಳ್ಳಬೇಕು ಇದು‌ ಜನರಿಗೆ ಪ್ರಯೋಜನಕಾರಿ ಕಾರ್ಯಕ್ರಮ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande