ವಿದ್ಯಾರ್ಥಿಗಳಿಗಾಗಿ 14 ವಿನೂತನ ಬಸ್‌ಗಳಿಗೆ ಚಾಲನೆ
ಬಸ್‌ ಗಳಿಗೆ
ವಿದ್ಯಾರ್ಥಿಗಳಿಗಾಗಿಯೇ 14 ವಿನೂತನ ಬಸ್ಸಗಳಿಗೆ ಸಿಎಂ ಸಮ್ಮುಖದಲ್ಲಿ ಚಾಲನೆ


ರಾಯಚೂರು, 04 ಜನವರಿ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲೇ ಸಿಂಧನೂರು ತಾಲೂಕಿನ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಶಾಸಕರ ವಿಶೇಷ ಪ್ರಯತ್ನದಿಂದಾಗಿ ಇನ್ಮುಂದೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದು ಹೋಗಲು ಅನುಕೂಲವಾಗುವಂತೆ ಸಿಂಧನೂರ ತಾಲೂಕಿನ ಪ್ರತಿ ಹಳ್ಳಿಹಳ್ಳಿಗಳ ರಸ್ತೆಗಳಿಗೆ ಹೊಸ 14 ಬಸ್‌ ಗಳು ಇಳಿಯಲಿವೆ.

ರಾಯಚೂರು ಜಿಲ್ಲೆಯಲ್ಲಿಯೇ ಸಿಂಧನೂರ ತಾಲೂಕಿನಲ್ಲಿ ದಾಖಲೆಯ ಈ ಬಸ್ ಸೌಕರ್ಯಕ್ಕೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಜನವರಿ 3ರಂದು ಅಂಬಾಮಠದ ಅವರಣದಲ್ಲಿ ವಿದ್ಯುಕ್ತ ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 5 ಕೋಟಿ ರೂ ಅನುದಾನದಲ್ಲಿ ತಿಳಿ ಹಸಿರು ಬಳಿ ಮಿಶ್ರಿತ 10 ಬಸ್‌ಗಳಿಗೆ ಸಾಂಕೇತಿಕವಾಗಿ ಹಸಿರು ನಿಶಾನೆ ತೋರಿದರು.

ಬಸ್ ಗಳಿಗೆ ಅಲಂಕಾರ : ಉದ್ಘಾಟನೆ ಹಿನ್ನೆಲೆಯಲ್ಲಿ ಅಂಬಾಮಠದ ಅಂಗಳದಲ್ಲಿ ನಿಲುಗಡೆಯಾಗಿದ್ದ ಎಲ್ಲ ಬಸಗಳಿಗೆ ಬಲೂನ್ ಕಟ್ಟಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಈ ಸಂದರ್ಭದಲ್ಲಿ ಸಿಂಧನೂರ ಶಾಸಕರಾದ ಹಂಪನಗೌಡ ಬಾದರ್ಲಿ ಸೇರಿದಂತೆ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಶಿವರಾಜ ತಂಗಡಗಿ, ಸತೀಶ ಜಾರಕಿಹೊಳಿ, ಸಂಸದರಾದ ರಾಜಶೇಖರ ಹಿಟ್ನಾಳ, ಶಾಸಕರಾದ ಬಸನಗೌಡ ದದ್ದಲ್, ಬಸನಗೌಡ ತುರವಿಹಾಳ, ಬಿಎಂ ನಾಗರಾಜ, ವಿಧಾನ ಪರಿಷತ್ ಶಾಸಕರಾದ ಎ ವಸಂತಕುಮಾರ, ಬಸನಗೌಡ ಬಾದರ್ಲಿ, ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಂ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಎಸ್ಪಿ ಅರುಣಾಂಕ್ಷು ಗಿರಿ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ ಸುಶೀಲಾ, ಮುಖ್ಯ ತಾಂತ್ರಿಕ ಶಿಲ್ಪಿಗಳಾದ ಸಂತೋಷಕುಮಾರ, ವಿಭಾಗೀಯ ನಿಯಂತ್ರಾಧಿಕಾರಿ ಚಂದ್ರಶೇಖರ, ವಿಭಾಗೀಯ ತಾಂತ್ರಿಕ ಶಿಲ್ಪಿಗಳಾದ ನಾಗರಾಜ ವಾರದ ಹಾಗೂ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande