ರಾಯಚೂರು ಉತ್ಸವ ಸಿದ್ಧತೆ ; ಎಲ್ಲ ಜನಪ್ರತಿನಿಧಿಗಳ ಸಭೆ
ರಾಯಚೂರು, 04 ಜನವರಿ (ಹಿ.ಸ.) : ಆ್ಯಂಕರ್ : ಜನವರಿ 29, 30 ಹಾಗೂ 31ರಂದು ನಿಗದಿಯಾದ ರಾಯಚೂರು ಉತ್ಸವ-2026ರ ವೇದಿಕೆಯ ಹಾಗೂ ನಾನಾ ಕಾರ್ಯಕ್ರಮಗಳ ಸಮಗ್ರ ಸ್ವರೂಪದ ಪ್ರಾತ್ಯಕ್ಷಿಕೆಯನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಎನ್ ಎಸ್ ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಡಾ.ಎಸ
ರಾಯಚೂರು ಉತ್ಸವ ಸಿದ್ಧತೆ; ಎಲ್ಲ ಜನಪ್ರತಿನಿಧಿಗಳ ಸಭೆ


ರಾಯಚೂರು ಉತ್ಸವ ಸಿದ್ಧತೆ; ಎಲ್ಲ ಜನಪ್ರತಿನಿಧಿಗಳ ಸಭೆ


ರಾಯಚೂರು ಉತ್ಸವ ಸಿದ್ಧತೆ; ಎಲ್ಲ ಜನಪ್ರತಿನಿಧಿಗಳ ಸಭೆ


ರಾಯಚೂರು, 04 ಜನವರಿ (ಹಿ.ಸ.) :

ಆ್ಯಂಕರ್ : ಜನವರಿ 29, 30 ಹಾಗೂ 31ರಂದು ನಿಗದಿಯಾದ ರಾಯಚೂರು ಉತ್ಸವ-2026ರ ವೇದಿಕೆಯ ಹಾಗೂ ನಾನಾ ಕಾರ್ಯಕ್ರಮಗಳ ಸಮಗ್ರ ಸ್ವರೂಪದ ಪ್ರಾತ್ಯಕ್ಷಿಕೆಯನ್ನು ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಎನ್ ಎಸ್ ಬೋಸರಾಜು, ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಡಾ.ಎಸ್.ಶಿವರಾಜ ಪಾಟೀಲ, ಬಸನಗೌಡ ತುರವಿಹಾಳ, ಹಂಪಯ್ಯ ನಾಯಕ, ಎ ವಸಂತಕುಮಾರ ಹಾಗೂ ಇನ್ನೀತರರು ವೀಕ್ಷಣೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 4ರಂದು ನಡೆದ ಜನಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ಸಚಿವರು ಹಾಗೂ ಶಾಸಕರು ಮಾತನಾಡಿ, ಉತ್ಸವಕ್ಕೆ ಸಂಬಂಧಿಸಿದಂತೆ ನಾನಾ ಸಲಹೆಗಳು ಮತ್ತು ಸೂಚನೆಗಳನ್ನು ನೀಡಿದರು.

ಎಲ್ಲ ಸಮಿತಿಗಳ ಮೇಲೆ ಮೇಲ್ವಿಚಾರಣಾ ಸಮಿತಿಯೊಂದನ್ನು ರಚಿಸಿ ಪ್ರತಿ ನಿತ್ಯ ಎಲ್ಲ ತಯಾರಿಯ ಮೇಲ್ವಿಚಾರಣೆ ಆಗಬೇಕು. ಕೂಡಲೇ ಜಿಲ್ಲೆಯ ಎಲ್ಲ ಸಂಘ-ಸಂಸ್ಥೆಗಳ, ಅಂಗಡಿಕಾರರ ಸಭೆ ನಡೆಸಿ ಅವರ ಸಲಹೆ ಪಡೆಯಬೇಕು. ಆಯಾ ತಹಸೀಲ್ದಾರರು ಹಾಗೂ ತಾಪಂ ಇಒಗಳು ಆಯಾ ತಾಲೂಕಿನಲ್ಲಿ ಸಭೆ ನಡೆಸಬೇಕು. ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವಾಗಿ ಕೆಲಸ ಮಾಡಿ ಕಾರ್ಯನಿರ್ವಹಿಸಬೇಕು.ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಆಡಳಿತ ಮಂಡಳಿಯ ಮುಖ್ಯಸ್ಥರ ಸಭೆ ನಡೆಸಬೇಕು. ಜಿಲ್ಲೆಯ ಎಲ್ಲ ಸಾಹಿತಿಗಳು, ಕಲಾವಿದರು, ಕವಿಗಳು, ವಕೀಲರು, ಮಹಿಳಾ ಸಂಘಗಳು, ಆಟೋ ಹಾಗೂ ವಾಹನ ಚಾಲಕರು, ಯುವ ಸಂಘಟನೆಗಳು ಮತ್ತು ನಾಗರಿಕ ಸಮಿತಿಗಳು ಸೇರಿದಂತೆ ಬೇರೆಲ್ಲ ಜನ ಸಮುದಾಯಗಳ ಸಭೆಗಳು ಆಗಬೇಕು. ಎಲ್ಲ ಶಾಲೆಗಳ ಶಿಕ್ಷಕರ ಹಾಗೂ ಕಾಲೇಜು ಉಪನ್ಯಾಸಕರ ಸಭೆಗಳು ಆಗಬೇಕು ಎಂದು ಸಚಿವರು ಶಾಸಕರು ಸಲಹೆ ಮಾಡಿದರು.

ವಾಲ್ಮೀಕಿ ವಿಶ್ವವಿದ್ಯಾಲಯ ಸೇರಿದಂತೆ ಮಹತ್ವದ ಬೇರೆ ಬೇರೆ ವಿದ್ಯಾ ಸಂಸ್ಥೆಗಳಲ್ಲಿ ಸಹ ಬೇರೆ ಬೇರೆ ಕಾರ್ಯಕ್ರಮಗಳ ಆಯೋಜನೆ ಮಾಡಲು ಸಲಹೆ ಮಾಡಿದರು.

ಉತ್ಸವದ ಲೋಗೋ ವೀಕ್ಷಣೆ: ಸಭೆಯಲ್ಲಿ ಮೊದಲಿಗೆ ರಾಯಚೂರು ಉತ್ಸವದ ಲೋಗೊ ವೀಕ್ಷಣೆ ನಡೆಯಿತು. ಮುಖ್ಯ ಕಾರ್ಯಕ್ರಮದ ವೇದಿಕೆ ಹಾಗೂ ಹೆಸರಾಂತ ಕಲಾವಿದರು ಭಾಗಿಯಾಗುವ ಬೃಹತ್ ವೇದಿಕೆಗಳ ಪ್ರಾತ್ಯಕ್ಷಿಕೆಯ ವೀಕ್ಷಣೆಯ ನಡೆಯಿತು.

ಈ ವೇಳೆ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಹತ್ತಾರು ವರ್ಷಗಳ ನಂತರ ಉತ್ಸವ ನಡೆಯುತ್ತಿದೆ. ಹಾಗಾಗಿ ಎಲ್ಲರನ್ನು ಒಳಗೊಂಡು ಉತ್ಸವ ನಡೆಯಬೇಕು. ಅಧಿಕಾರಿಗಳು ಉತ್ಸವದ ಕಾರ್ಯಗಳನ್ನು ಹಗರುವಾಗಿ ತೆಗೆದುಕೊಳ್ಳಬಾರದು. ಇದು ರಾಯಚೂರು ಸಿಟಿ ಉತ್ಸವ ಅಲ್ಲ; ಜಿಲ್ಲಾ ಉತ್ಸವವಾಗಿದೆ. ಹಾಗಾಗಿ ಎಲ್ಲರೂ ಪಕ್ಷಬೇಧ ಮರೆತು ಒಗ್ಗೂಡಿ ಉತ್ಸವ ಮಾಡೋಣ ಎಂದು ಸಲಹೆ ಮಾಡಿದರು.

ಉತ್ಸವ ಬೇರೆ ಬೇರೆ ರೀತಿ ನಡೆಯುತ್ತದೆ. ಕ್ರೀಡಾ ಚಟುವಟಿಕೆ ಈಗ ಆರಂಭವಾಗಿವೆ. ರಾಜ್ಯಮಟ್ಟದ ವಾಲಿಬಾಲ್, ಕಬ್ಬಡ್ಡಿ ಪಂದ್ಯ ನಡೆಯಲಿವೆ. ಸೈಕ್ಲಿಂಗ್ ಮ್ಯಾರಾಥಾನ್, ಸೈಕ್ಲಿಂಗ್ ಓಟ, ಕುಸ್ತಿ ಪಂದ್ಯ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಗಳು ನಡೆಯಲಿವೆ. ಜನವರಿ 29ರಂದು ಬೆಳಗ್ಗೆ ಮೆರವಣಿಗೆ, ಸಂಜೆ 5ರಿಂದ ಉತ್ಸವದ ಉದ್ಗಾಟನೆ ನಡೆಯಲಿದೆ.

ಜಿಲ್ಲಾ ರಂಗಮಂದಿರ, ಕೃಷಿ ವಿವಿ ಆವರಣದಲ್ಲಿನ ಕಾನ್ಫರೆನ್ಸ್ ಹಾಲ್ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗಿದೆ. ಜನವರಿ 30ರಂದು ಬೆಳಗ್ಗೆ ಉದ್ಯೋಗ ಮೇಳ ನಡೆಯಲಿದೆ.

ಫಲಪುಷ್ಪ ಮೇಳವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಮತ್ಸಮೇಳ, ಡಾಗ್ ಶೋ, ಶಾಲಾ ಮಕ್ಕಳಿಗಾಗಿ ಪ್ರಬಂಧ, ಸಾಹಿತಿಗಳಿಂದ ಕವಿಗೋಷ್ಟಿ, ಮಹಿಳಾ ಗೋಷ್ಠಿ, ಮಾಧ್ಯಮ ಗೋಷ್ಠಿ ನಡೆಸಲಾಗುತ್ತದೆ.

ಆಹಾರ ಮೇಳ ನಡೆಸಿ100 ಸ್ಟಾಲಗಳ ಅಳವಡಿಕೆಗೆ ಯೋಜನೆ ಮಾಡಿದ್ದೇವೆ. ಜನವರಿ 31ರಂದು ಗ್ಯಾರಂಟಿ ಮೇಳ ಬೆಳಗ್ಗೆ 10 ದಿಂದ 2 ಗಂಟೆವರೆಗೆ ಜೊತೆಗೆ ಕೃಷಿ ಮೇಳ ನಡೆಸಲು ಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಸಭೆಗೆ ವಿವರಿಸಿದರು.

ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿಯ ಪವನ್ ಕಿಶೋರ್ ಪಾಟೀಲ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅರುಣಾಂಕ್ಷು ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಪಾಲಿಕೆಯ ಸಮಿತಿ ಕಾರ್ಯದರ್ಶಿ ಕೃಷ್ಣ ಶಾವಂತಗೇರಿ, ತಹಸೀಲ್ದಾರ ಸುರೇಶ ವರ್ಮಾ ಸೇರಿದಂತೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ಧರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande