

ಬಳ್ಳಾರಿ, 17 ಜನವರಿ (ಹಿ.ಸ.) :
ಆ್ಯಂಕರ್ : ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಅಳವಡಿಕೆಯ ಸಂದರ್ಭದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾಗಿರುವ ಯುವಕ, ಕಾಂಗ್ರೆಸ್ಸಿಗ ರಾಜಶೇಖರೆಡ್ಡಿ ಅವರ ಸಂತ್ರಸ್ತ ತಾಯಿಗೆ ಕರ್ನಾಟಕ ಬಿಜೆಪಿಯು 10 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಪರಿಹಾರವಾಗಿ ನೀಡಿದೆ. ಅಲ್ಲದೇ, ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಬಿಜೆಪಿಯ ಹಿರಿಯರು ಮೃತನ ಮನೆಗೆ ಭೇಟಿ ನೀಡಿ, ಮೃತನ ತಾಯಿಗೆ ಸಾಂತ್ವನ ಹೇಳಿ, 10 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ವಿತರಣೆ ಮಾಡಿ, ಸುದ್ದಿಗಾರರ ಜೊತೆ ಮಾತನಾಡಿ, ರಾಜಶೇಖರರೆಡ್ಡಿಯದ್ದು ಕಾಂಗ್ರೆಸ್ ಯೋಜಿತ ಕೊಲೆ. ಕಾಂಗ್ರೆಸ್ಸಿಗರೇ ಯುವಕನ ಮೇಲೆ ಗುಂಡು ಹಾರಿಸಿ, ಕೊಲೆ ಮಾಡಿದ್ದಾರೆ. ಬಡತನದಲ್ಲಿರುವ ರಾಜಶೇಖರರೆಡ್ಡಿಯ ಕುಟುಂಬದ ನೋವಿಗೆ ಸ್ಪಂದಿಸಲು ಕರ್ನಾಟಕ ಬಿಜೆಪಿ ಅವರ ಮನೆ ಬಾಗಿಲಿದೆ ಎಂದಿದೆ ಎಂದರು.
ನಮ್ಮ ಪರಿಹಾರದಿಂದ ಮೃತನ ತಾಯಿಗೆ ನ್ಯಾಯ ಸಿಗುವುದಿಲ್ಲ. ಆದರೆ, ಸಂಕಷ್ಟದಲ್ಲಿರುವ ಕುಟುಂಬದ ಭವಿಷ್ಯಕ್ಕೆ ಈ ಪರಿಹಾರ ನೆರವಾಗಲಿದೆ. ಮುಖ್ಯಮಂತ್ರಿಗಳು ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮುಖಂಡ ಬಿ. ಶ್ರೀರಾಮುಲುಅ ಅವರು, ಮೃತ ರಾಜಶೇಖರ ರೆಡ್ಡಿ ಅವರ ತಾಯಿಗೆ ಘಟನೆಯ ಸತ್ಯವನ್ನು ವಿವರಿಸಿ, ಮನವರಿಕೆ ಮಾಡಿಕೊಟ್ಟು ನಮ್ಮಿಂದ (ಬಿಜೆಪಿ) ಯಾವುದೇ ತಪ್ಪಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದೇವೆ ಎಂದರು.
ಸಂಸದ ಗೋವಿಂದ ಕಾರಜೋಳ, ವಿಧಾನಪರಿಷತ್ ವಿಪಕ್ಷ ನಾಯಕ ಛಲುವಾದಿ ನಾರಾಯಣಸ್ವಾಮಿ, ಶಾಸಕ ಜಿ. ಜನಾರ್ದನ ರೆಡ್ಡಿ, ಲಕ್ಷ್ಮಿ ಅರುಣ ಸೇರಿ ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್