ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆ
ಧಾರವಾಡ, 16 ಜನವರಿ (ಹಿ.ಸ.) : ಆ್ಯಂಕರ್ : ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಧಾರವಾಡ ಜಿಲ್ಲೆಯ 388 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಜಾರಿಗೆ ಬರುತ್ತಿರುವ DBOT ಮಾದರಿಯ ಬಹುಗ್ರಾಮ ಕುಡಿಯುವ ನೀರು ಸರಬರಾಜುಯೋಜನೆಯ ಕಾಮಗಾರಿ ಸ್ಥಳ ಪರಿಶೀಲನೆ ನಡೆ
Meeting


ಧಾರವಾಡ, 16 ಜನವರಿ (ಹಿ.ಸ.) :

ಆ್ಯಂಕರ್ : ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಧಾರವಾಡ ಜಿಲ್ಲೆಯ 388 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ಜಾರಿಗೆ ಬರುತ್ತಿರುವ DBOT ಮಾದರಿಯ ಬಹುಗ್ರಾಮ ಕುಡಿಯುವ ನೀರು ಸರಬರಾಜುಯೋಜನೆಯ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು. ಮತ್ತು ಪ್ರಗತಿ ಪರಿಶೀಲಿಸಿದರು.

ಈ ಯೋಜನೆಯನ್ನು ಎಂ/ಎಸ್ ಎಲ್ & ಟಿ ಲಿಮಿಟೆಡ್ ಕಂಪನಿಯು ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತಿದೆ ಎಂದು ಹೇಳಿದರು.

ಪರಿಶೀಲನಾ ಸಂದರ್ಭ, ಇಂಟೇಕ್ ಪಾಯಿಂಟ್‌, ಪೈಪ್‌ಲೈನ್ ಮಾರ್ಗ ಹಾಗೂ ವಾಟರ್‌ ಟ್ರಿಟ್‌ಮೆಂಟ್ ಪ್ಲಾಂಟ್‌ (WTP) ಸ್ಥಳಗಳನ್ನು ಪರಿಶೀಲಿಸಿ. ಪ್ರಸ್ತುತ ಇಂಟೇಕ್ ಮತ್ತು ರಾ ವಾಟರ್‌ ರೈಜಿಂಗ್‌ ಮೇನ್‌ ಕಾಮಗಾರಿಗಳು ಪೂರ್ಣಗೊಂಡಿವೆ, ಆದರೆ WTPಯಲ್ಲಿ ಕೆಲವು ಸಣ್ಣ ಪ್ರಮಾಣದ ಕಾಮಗಾರಿಗಳು ಇನ್ನೂ ಬಾಕಿ ಇವೆ ಎಂದು ಹೇಳಿದರು.

ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಫೆಬ್ರುವರಿ ಅಂತ್ಯದವರೆಗೆ 24 ಹಳ್ಳಿಗಳಿಗೆ, ಮಾರ್ಚ್ ಅಂತ್ಯದವರೆಗೆ 49 ಹಳ್ಳಿಗಳಿಗೆ, ಏಪ್ರಿಲ್ ಅಂತ್ಯದವರೆಗೆ 90 ಹಳ್ಳಿಗಳಿಗೆ ಹಂತ ಹಂತವಾಗಿ ಪ್ರಯೋಗಾತ್ಮಕವಾಗಿ ನೀರು ಪೂರೈಕೆ (ಟ್ರಯಲ್‌ ರನ್‌) ಪ್ರಾರಂಭಿಸಲು ಅವರು ಸೂಚಿಸಿದರು.

ಯೋಜನೆಯ ಗುಣಮಟ್ಟ, ಕಾಮಗಾರಿಯ ವೇಗ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ತ್ವರಿತವಾಗಿ ಪರಿಹಾರ ಒದಗಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರ ಜಗದೀಶ ಪಾಟೀಲ, ಕಾರ್ಯನಿರ್ವಹಣಾ ಅಭಿಯಂತರರು, ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿಗಳು ಮತ್ತು ಇತರ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande