ಕೊಪ್ಪಳ, 16 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಮುಸ್ಲಿಂ ಯುನಿಟಿಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಜಿಲಾನ್ ಕಿಲ್ಲೇದಾರರವರ ಅಧ್ಷತೆಯಲ್ಲಿ ಜಿಲ್ಲಾ ಸಮಿತಿಯ ಸಭೆ ಕರೆಯಲಾಗಿತ್ತು, ಸಭೆಯಲ್ಲಿ ಜಿಲ್ಲಾ ಸಮಿತಿಗೆ ವಕ್ತಾರರನ್ನಾಗಿ ನಜೀರ್ ಅಹ್ಮದ್ ಮುದಗಲ್ ರವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲೆಯ ಎಲ್ಲಾ ತಾಲೂಕ ಸಮಿತಿಗಳನ್ನು ತ್ವರಿತವಾಗಿ ರಚನೆ ಮಾಡುವಂತೆ ಹಾಗೂ ಜಿಲ್ಲಾ ಮತ್ತು ತಾಲೂಕುಗಳ ಮಹಿಳಾ ಘಟಕ ಹಾಗೂ ಜಿಲ್ಲಾ ಮತ್ತು ಎಲ್ಲ ತಾಲೂಕುಗಳ ಯುವ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಸಭೆಯಲ್ಲಿ ತಿರ್ಮಾಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸೀರಾಜುದ್ದೀನ ಮನಿಯಾರ್, ಜಿಲ್ಲಾ ಕಾರ್ಯದರ್ಶಿಗಳಾದ ಮುಸ್ತಫಾ ಕುದರಿಮೋತಿ, ಸದಸ್ಯರಾದ ಆಶಿಫ್ ಕರ್ಕಿಹಳ್ಳಿ. ಗಫಾರ್ ದಿಡ್ಡಿ ಮತ್ತು ಅಜೀಜ್ ಮಾನ್ವಿಕರ್, ಸೈಯದ್ ನಾಸೀರ್ ಹುಸೇನಿ, ಕೊಪ್ಪಳ ತಾಲೂಕಾ ಅಧ್ಯಕರಾದ ಫಕ್ರುಸಾಬ್ ನದಾಫ್, ತಾಲೂಕಾ ಕಾರ್ಯದರ್ಶಿ ಹಜರತ್‌ಅಲಿ ಮುಜಾವರ್, ಸಂಘಟನಾ ಕಾರ್ಯದರ್ಶಿ ಖಾಸಿಂಸಾಬ ಹಲಗೇರಿ ಹಾಗೂ ಕಾರಟಗಿ ತಾಲೂಕ ಅಧ್ಯಕ್ಷರಾದ ಅಮರುಲ್ ಸಾಬ, ಮುಸ್ತಫಾ, ಚಾಂದಪಾಷಾ ಬಸಾಪುರ, ಮುಸ್ತಫಾ ಬಸಾಪುರ, ಸೀರಾಜ್ ಸಾಬ ತಳಕಲ್ಲ, ಲೇಬಗೇರಿ ಜಿಲ್ಲಾ ಪಂಚಾಯತ್ ಘಟಕದ ಅಧ್ಯಕ್ಷರಾದ ಬಾಷಾ ಹಿರೇಮನಿ, ಸಲೀಂ ಕೊತ್ವಾಲ್ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್