ಕೊಪ್ಪಳ : ಕಾಲಮಿತಿಯಲ್ಲಿ ಸಕಾಲ ಅರ್ಜಿ ವಿಲೇವಾರಿ - ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ
ತಿರಸ್ಕೃತ
ಕೊಪ್ಪಳ : ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ : ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ : ಸಕಾಲ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ


ಕೊಪ್ಪಳ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಕಾಲ ಐ.ಪಿ.ಜಿ.ಆರ್.ಎಸ್ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿ ಮತ್ತು ಕೇಸ ವರ್ಕರಗಳು ಕ್ರಮ ವಹಿಸ ಬೇಕು. ಇಲ್ಲದಿದ್ದರೆ ತಮಗೆ ದಂಡ ಹಾಕಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಸಕಾಲ ಸಮನ್ವಯ ಸಮಿತಿ ಹಾಗೂ ಐ.ಪಿ.ಜಿ.ಆರ್.ಎಸ್ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಸಕಾಲ ಮತ್ತು ಐ.ಪಿ.ಜಿ.ಆರ್.ಎಸ್ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರತಿ ಇಲಾಖೆಯ ತಮ್ಮ ಕೇಂದ್ರ ಕಚೇರಿಯಲ್ಲಿ ಇದಕ್ಕೆ ಒಬ್ಬ ಕನ್ಸಲಟಂಟ್ ಇರುತ್ತಾರೆ. ಅವರಿಂದ ಕೇಳಿ ತಿಳಿದುಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೆ ಅರ್ಜಿಗಳು ಬಾಕಿ ಇರಬಾರದು ಮತ್ತು ಅರ್ಜಿಗಳನ್ನು ರಿಜೆಕ್ಟ್ ಆಗದಂತೆ ನೋಡಿಕೊಳ್ಳಬೇಕು. ಬೇರೆ ಜಿಲ್ಲೆಯಲ್ಲಿ ಆಗುವುದಿಲ್ಲ ನಮ್ಮ ಜಿಲ್ಲೆಯಲ್ಲಿ ಹೆಚ್ಚು ಅರ್ಜಿಗಳು ಯಾಕೆ ತಿರಸ್ಕೃತ ಆಗುತ್ತವೆ ಎಂದು ಹೇಳಿದರು.

ನಾನಾ ಇಲಾಖೆಗಳಲ್ಲಿ ಯಾವುದೇ ಕಾರಣಕ್ಕೆ ಅರ್ಜಿಗಳನ್ನು ರಿಜೆಕ್ಟ್ ಮಾಡಿದರೆ ಅದು ಸಕಾಲದಲ್ಲಿ ಮಾಡಬೇಕು ಮತ್ತು ಅವುಗಳು ವಿಲೇವಾರಿ ಆಗಭಾರದು. ಈ ಕೆಲಸವನ್ನು ಈ ತಿಂಗಳಿನಿಂದಲೆ ಮಾಡಬೇಕು. ಬರುವ ತಿಂಗಳಲ್ಲಿ ಈ ಸಮಸ್ಯೆಗಳು ಮರುಕಳಿಸಭಾರದು ಮತ್ತು ಮುಂದಿನ ಸಭೆಗೆ ಬರುವಾಗ ಸರಿಯಾದ ಮಾಹಿತಿಯೊಂದಿಗೆ ಬರಬೇಕೆಂದು ಹೇಳಿದರು.

ಸಂಬಂದಪಟ್ಟವರಿಗೆ ಆನಲೈನ್ ಕಂಪ್ಲೆಂಟ್ ರೇಜ ಮಾಡಬೇಕು ಅಥವಾ ಅವರಿಗೆ ಪೋನ ಮಾಡಿಯಾದರು ತಿಳಿಸಬೇಕು. ಸಕಾಲದಲ್ಲಿ ಬರುವ ಅರ್ಜಿಗಳನ್ನು 21 ದಿನಗಳಲ್ಲಿ ವಿಲೇವಾರಿ ಆಗಬೇಕು. ಹಾಗಾಗಿ ಗುಣಾತ್ಮಕ ವಿಲೇವಾರಿಗೆ ಎಲ್ಲರೂ ಪ್ರಯತ್ನ ಪಡಬೇಕು. ಸಕಾಲ ಹಾಗೂ ಐ.ಪಿ.ಜಿ.ಆರ್.ಎಸ್ ಬಗ್ಗೆ ಏನಾದರೂ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕೆಂದು ಹೇಳಿದರು.

ಈ ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಜಗದೀಶ್, ಮೀನುಗಾರಿಕೆ ಇಲಾಖೆಯ ಉಪ ನಿರ್ದೆಶಕ ಡಾ. ಶ್ರೀನಿವಾಸ ಕುಲಕರ್ಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೆಶಕ ಡಾ. ಪಿ.ಎಂ. ಮಲ್ಲಯ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪುಷ್ಪಲತಾ ಕವಲೂರು, ಭೂದಾಖಲೆ ಇಲಾಖೆಯ ಉಪನಿರ್ದೇಶರಾದ ಭಾಗ್ಯಮ್ಮ ಬಿ., ಸಕಾಲ ಕನ್ಸಲ್ಟಂಟ್ ವಿಶ್ವನಾಥ, ಐ.ಪಿ.ಜಿ.ಆರ್.ಎಸ್ ಕನ್ಸಲ್ಟಂಟ್ ಜಾಫರ್ ಭಾಗವಾನ್ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande