ಬಳ್ಳಾರಿ : ಜಂಗಮರು ಮತ್ತು ವೀರಶೈವ ಲಿಂಗಾಯಿತರ ಐಕ್ಯತೆಗಾಗಿ `ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್'
ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸಮಸ್ತ ಜಂಗಮರ ಮತ್ತು ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆಗಾಗಿ `ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್'' ಸಂಘಟನೆಯನ್ನು ರಚಿಸಿದ್ದು ಸೆಪ್ಟಂಬರ್ 18ರ ಗುರುವಾರ ಬೆಳಗ್ಗೆ 11 ಗಂಟೆಗೆ ರಾಘವಕಲಾ ಮಂದಿರದಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಪರಿಷತ್ತಿ
ಬಳ್ಳಾರಿ : ಜಂಗಮರು ಮತ್ತು ವೀರಶೈವ ಲಿಂಗಾಯಿತರ ಐಕ್ಯತೆಗಾಗಿ `ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್'


ಬಳ್ಳಾರಿ : ಜಂಗಮರು ಮತ್ತು ವೀರಶೈವ ಲಿಂಗಾಯಿತರ ಐಕ್ಯತೆಗಾಗಿ `ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್'


ಬಳ್ಳಾರಿ : ಜಂಗಮರು ಮತ್ತು ವೀರಶೈವ ಲಿಂಗಾಯಿತರ ಐಕ್ಯತೆಗಾಗಿ `ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್'


ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸಮಸ್ತ ಜಂಗಮರ ಮತ್ತು ವೀರಶೈವ ಲಿಂಗಾಯತ ಸಮುದಾಯದ ಐಕ್ಯತೆಗಾಗಿ `ಭಾರತೀಯ ವೀರಶೈವ ಲಿಂಗಾಯತ ಜಂಗಮ ಪರಿಷತ್' ಸಂಘಟನೆಯನ್ನು ರಚಿಸಿದ್ದು ಸೆಪ್ಟಂಬರ್ 18ರ ಗುರುವಾರ ಬೆಳಗ್ಗೆ 11 ಗಂಟೆಗೆ ರಾಘವಕಲಾ ಮಂದಿರದಲ್ಲಿ ಉದ್ಘಾಟಿಸಲಾಗುತ್ತದೆ ಎಂದು ಪರಿಷತ್ತಿನ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ಅವರು ತಿಳಿಸಿದ್ದಾರೆ.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ಈ ಸಭೆಯು ಜಂಗಮರ ಜಾಗೃತ ಸಮಾವೇಶವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಜಾತಿ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆ 556- ಜಂಗಮ, 1523 - ವೀರಶೈವ ಜಂಗಮ, ಜಂಗಮರು, 1525-ವೀರಶೈವ ಲಿಂಗಾಯತ ಜಂಗಮ ಎಂದು ಬರೆಸಲು ಸರ್ವರಲ್ಲಿ ಜಾಗೃತಿ ಮೂಡಿಸಿ, ಮನವಿ ಮಾಡಲಾಗುತ್ತದೆ ಎಂದರು.

ಪ್ರಸ್ತುತ ಪ್ರಯತ್ನದಿಂದ ಹಿಂದುಳಿದ ಆಯೋಗದ ಜಾತಿ ಪಟ್ಟಿಯಲ್ಲಿ `ಜಂಗಮ' ಜಾತಿ ಸೇರ್ಪಡೆಯಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ಹಂತದ ಜಾತಿ ದಾಖಲೆಗಳಲ್ಲಿ `ಜಂಗಮ' ಜಾತಿಯನ್ನು ಸೇರ್ಪಡೆ ಮಾಡಲು ಅಲ್ಲದೇ, ಕೇಂದ್ರ ಸರ್ಕಾರದ ಜಾತಿ ಗಣತಿಯಲ್ಲೂ `ಜಂಗಮ' ಜಾತಿಯ ಹೆಸರನ್ನು ನಮೂದಿಸಲು ಪ್ರಯತ್ನಿಸಲಾಗುತ್ತದೆ ಎಂದರು.

ದಾವಣಗೆರೆಯಲ್ಲಿ ನಡೆದ ಪಂಚಪೀಠಗಳ ಜಗದ್ಗುರುಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ `ವೀರಶೈವ ಲಿಂಗಾಯತ' ಬರೆಯಿಸಿ ಜಾತಿ, ಉಪಜಾತಿಯ ಕಾಲಂನಲ್ಲಿ ಅವರವರ ಜಾತಿಯನ್ನು ಬರೆಯಿಸಲು, ಅಖಿಲ ಭಾರತ ವೀರಶೈವ ಮಹಾಸಭೆಯ ತೀರ್ಮಾನದಂತೆ `ಧರ್ಮದ ಕಾಲಂ'ನಲ್ಲಿ `11 ಇತರೆ' ಎಂದು ನಮೂದಿಸಲಾಗುತ್ತದೆ ಎಂದರು.

ಪ್ರಸ್ತುತ ಇರುವ ವೀರಶೈವ ಮತ್ತು ಲಿಂಗಾಯಿತ ವಿವಾದದ ಸ್ಪಷ್ಟತೆಗಾಗಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಸೆಪ್ಟಂಬರ್ 19ರ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಭೆಯ ನಿರ್ಣಯದ ಪ್ರಕಾರ ಸೂಕ್ತ ನಡೆಯನ್ನು ಇರಿಸಲಾಗುತ್ತದೆ ಎಂದರು.

ಚಂದ್ರಮೌಳಿ, ನಿವೃತ್ತ ಪ್ರಾಂಶುಪಾಲರಾದ ಪ್ರಭಯ್ಯಸ್ವಾಮಿ, ಎಣ್ಣಿ ಎರ್ರಿಸ್ವಾಮಿ, ಹಚ್ಚೊಳ್ಳಿ ಗೌರಿಶಂಕರ, ಎಚ್.ಎಂ. ಕಿರಣ್‍ಕುಮಾರ್, ವೀಭೂತಿ ಎರ್ರಿಸ್ವಾಮಿ, ನಿವೃತ್ತ ಶಿಕ್ಷಕರಾದ ರುದ್ರಯ್ಯ, ರೇಣುಕಾ ಪ್ರಸಾದ್, ಜಾಲಿಹಾಳ್ ಶಶಿಧರ್, ನ್ಯಾಯವಾದಿ ಗುರುಬಸವರಾಜ್, ಕೆ.ಎಂ. ಕೊಟ್ರೇಶ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande