ರಾಯಚೂರು, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿರವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅರ್ಹ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಭೌತಶಾಸ್ತ್ರ ಉಪನ್ಯಾಸಕರ 01 ಹುದ್ದೆಗೆ ಎಂ.ಎಸ್ಸಿ ಭೌತಶಾಸ್ತ್ರ ಹಾಗೂ ಬಿ.ಎಡ್., ರಸಾಯನಶಾಸ್ತ್ರ ಉಪನ್ಯಾಸಕರ 01 ಹುದ್ದೆಗೆ ಎಂ.ಎಸ್ಸಿ ರಸಾಯನಶಾಸ್ತ್ರ ಹಾಗೂ ಬಿ.ಎಡ್., ಗಣಿತ ಉಪನ್ಯಾಸಕರ 01 ಹುದ್ದೆಗೆ ಎಂ.ಎಸ್ಸಿ ಗಣಿತ ಹಾಗೂ ಬಿ.ಎಡ್., ಜೀವಶಾಸ್ತ್ರ ಉಪನ್ಯಾಸಕರ 01 ಹುದ್ದೆಗೆ ಎಂ.ಎಸ್ಸಿ ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ ಹಾಗೂ ಬಿ.ಎಡ್., ಕನ್ನಡ ಭಾಷೆ, ಉಪನ್ಯಾಸಕರ 01 ಹುದ್ದೆಗೆ ಎಂ.ಎ ಕನ್ನಡ ಹಾಗೂ ಬಿ.ಎಡ್, ಆಂಗ್ಲ ಭಾಷೆ, ಉಪನ್ಯಾಸಕರ 01 ಹುದ್ದೆಗೆ ಎಂ.ಎ ಇಂಗ್ಲಿμï ಹಾಗೂ ಬಿ.ಎಡ್ ಪದವಿ ಪಡೆದಿರಬೇಕು.
ಅರ್ಜಿ ಸಲ್ಲಿಸಲು ಇಚ್ಛಸುವ ಅಭ್ಯರ್ಥಿಗಳು ಆಗಸ್ಟ್ 18ರ ಸಂಜೆ 4.30 ರೊಳಗೆ ಪ್ರಾಂಶುಪಾಲರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಥವಾ ವಸತಿ ಕಾಲೇಜು ಸಿರವಾರ (ಪ.ಪಂ-496) ಇವರಿಗೆ ಎಲ್ಲಾ ದೃಢೀಕೃತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಾತ್ಯಕ್ಷಿಕೆ ತರಗತಿ (ಡೆಮೋಕ್ಲಾಸ್)ಗೆ ಹಾಜರಾಗಬೇಕು. ಅಲ್ಲದೆ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಅಥವಾ ವಸತಿ ಕಾಲೇಜು ಸಿರವಾರ (ಪ.ಪಂ-496) ದೂರವಾಣಿ ಸಂಖ್ಯೆ: 9901866601ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್