ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರನ್ನು ಪುನಃ ಸಚಿವರನ್ನಾಗಿಸಿ : ವಾಲ್ಮೀಕಿಗಳ ಆಗ್ರಹ
ಬಳ್ಳಾರಿ, 13 ಆಗಸ್ಟ್ (ಹಿ.ಸ.) : ಆ್ಯಂಕರ್ : ಹಿರಿಯ ರಾಜಕಾರಣಿ ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರನ್ನು ತಕ್ಷಣವೇ ಸಚಿವರನ್ನಾಗಿ ನೇಮಕ ಮಾಡಲು ಆಗ್ರಹಿಸಿ ಬಳ್ಳಾರಿ ಜಿಲ್ಲಾ ವಾಲ್ಮೀಕಿ ಸಮುದಾಯದ ಸರ್ವ ಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ. ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಸರ್ವ ಪಕ್ಷಗಳ
ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರನ್ನು ಪುನಃ ಸಚಿವರನ್ನಾಗಿಸಿ : ವಾಲ್ಮೀಕಿಗಳ ಆಗ್ರಹ


ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರನ್ನು ಪುನಃ ಸಚಿವರನ್ನಾಗಿಸಿ : ವಾಲ್ಮೀಕಿಗಳ ಆಗ್ರಹ


ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರನ್ನು ಪುನಃ ಸಚಿವರನ್ನಾಗಿಸಿ : ವಾಲ್ಮೀಕಿಗಳ ಆಗ್ರಹ


ಬಳ್ಳಾರಿ, 13 ಆಗಸ್ಟ್ (ಹಿ.ಸ.) :

ಆ್ಯಂಕರ್ : ಹಿರಿಯ ರಾಜಕಾರಣಿ ಕೆ.ಎನ್. ರಾಜಣ್ಣ ಮತ್ತು ಬಿ. ನಾಗೇಂದ್ರ ಅವರನ್ನು ತಕ್ಷಣವೇ ಸಚಿವರನ್ನಾಗಿ ನೇಮಕ ಮಾಡಲು ಆಗ್ರಹಿಸಿ ಬಳ್ಳಾರಿ ಜಿಲ್ಲಾ ವಾಲ್ಮೀಕಿ ಸಮುದಾಯದ ಸರ್ವ ಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಸರ್ವ ಪಕ್ಷಗಳ ವಾಲ್ಮೀಕಿ ಮುಖಂಡರು, ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿದ್ದು ಖಂಡನೀಯ. ಬಿ. ನಾಗೇಂದ್ರ ಅವರಿಂದ ಸುಳ್ಳುಗಳಿಂದಲೇ ರಾಜೀನಾಮೆ ಪಡೆದ ಕಾಂಗ್ರೆಸ್, ಮತ್ತೊಮ್ಮೆ ಸುಳ್ಳುಗಳಿಂದಲೇ ಕೆ.ಎನ್. ರಾಜಣ್ಣ ಅವರಿಂದ ರಾಜೀನಾಮೆ ಪಡೆದಿದೆ. ಇವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನವನ್ನು ತಕ್ಷಣವೇ ನೀಡದಿದ್ದಲ್ಲಿ ಕಾಂಗ್ರೆಸ್ ವಾಲ್ಮೀಕಿ ಸಮಾಜದ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಿ. ನಾಗೇಂದ್ರ ಮತ್ತು ಕೆ.ಎನ್. ರಾಜಣ್ಣ ಅವರ ರಾಜೀನಾಮೆ ಪ್ರಕರಣಗಳಿಂದ ವಾಲ್ಮೀಕಿ ಸಮಾಜವು ಕಾಂಗ್ರೆಸ್‍ನಿಂದ ವಂಚನೆಗೆ ಒಳಗಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರು ವಾಲ್ಮೀಕಿ ಸಮಾಜಕ್ಕಾಗಿರುವ ಅನ್ಯಾಯವನ್ನು ತಕ್ಷಣವೇ ಸರಿಪಡಿಸಬೇಕು. ಹಣಕಾಸು ಇಲಾಖೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿದೆ. ಅದ್ಹೇಗೆ ಅವರ ಗಮನಕ್ಕಿಲ್ಲದೆಯೇ 178 ಕೋಟಿ ರೂಪಾಯಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ನಡೆಯಿತು? ಆದರೂ, ಬಿ. ನಾಗೇಂದ್ರ ಅವರನ್ನು ಷಡ್ಯಂತ್ರಕ್ಕೆ ಬಲಿಪಶುವನ್ನಾಗಿ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೀನಳ್ಳಿ ಡಿ. ತಾಯಣ್ಣ, ಯುವ ಮುಖಂಡರಾದ ಜೋಳದರಾಶಿ ತಿಮ್ಮಪ್ಪ, ನ್ಯಾಯವಾದಿಗಳಾದ ಜಯರಾಂ, ಮುಖಂಡರಾದ ಶಿವಕುಮಾರ್, ಬಳ್ಳಾರಿ ಮಹಾನಗರ ಪಾಲಿಕೆ ಕೆ. ಹನುಮಂತಪ್ಪ, ಹನುಮಂತಪ್ಪ, ಗೋಪಾಲ್ ಇನ್ನಿತರರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande