ಧರ್ಮಸ್ಥಳ ಪ್ರಕರಣ : ಅನಗತ್ಯ ಹೇಳಿಕೆ ಬೇಡ-ಯು.ಟಿ.ಖಾದರ್
ಬೆಂಗಳೂರು, 13 ಆಗಸ್ಟ್ (ಹಿ.ಸ.) : ಆ್ಯಂಕರ್ : ಧರ್ಮಸ್ಥಳ ಸಾಮೂಹಿಕ ಶವ ಹೂತಿರುವ ಪ್ರಕರಣ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಯಾರು ಅನಗತ್ಯ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅ
Khadar


ಬೆಂಗಳೂರು, 13 ಆಗಸ್ಟ್ (ಹಿ.ಸ.) :

ಆ್ಯಂಕರ್ : ಧರ್ಮಸ್ಥಳ ಸಾಮೂಹಿಕ ಶವ ಹೂತಿರುವ ಪ್ರಕರಣ ಕುರಿತು ನಡೆಯುತ್ತಿರುವ ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಯಾರು ಅನಗತ್ಯ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾತನಾಡಿದ ಅವರು, ಧಾರ್ಮಿಕ ಸ್ಥಳದ ಪಾವಿತ್ರತೆಯನ್ನು ಎಲ್ಲರೂ ಕಾಪಾಡಬೇಕು ಎಂದರು.

ಮಂಗಳವಾರ ಪ್ರತಿ ಪಕ್ಷಗಳು ಚರ್ಚೆಗೆ ಅವಕಾಶ ಕೇಳಿದ ಹಿನ್ನೆಲೆಯಲ್ಲಿ ಶೂನ್ಯವೇಳೆಯಲ್ಲಿ ಅನುಮತಿಸಲಾಗಿತ್ತು, ಸರ್ಕಾರವೂ ಉತ್ತರ ನೀಡಿದೆ, ಮತ್ತಷ್ಟು ಚರ್ಚೆಗೆ ಅವಕಾಶ ನೀಡಲು ತಾವು ಬದ್ದವಾಗಿರುವುದಾಗಿ ತಿಳಿಸಿದ್ದಾರೆ.

ತನಿಖೆ ಮುಗಿಯುವ ಮೊದಲು ಯಾರೂ ತೀರ್ಪು ನೀಡುವುದು ಸರಿಯಲ್ಲ. ಧಾರ್ಮಿಕ ಸ್ಥಳದ ಪಾವಿತ್ರತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ, ತನಿಖೆ ಮುಗಿಯುವವರೆಗೂ, ಅನಗತ್ಯ ಹೇಳಿಕೆಗಳನ್ನು ನೀಡದಂತೆ ಅವರು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande