ಬಳ್ಳಾರಿ, 13 ಆಗಸ್ಟ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರದ ಮಿಲ್ಲರ್‍ಪೇಟೆಯಲ್ಲಿರುವ ಕಲ್ಯಾಣ ಸ್ವಾಮಿಗಳ ಮಠದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ `ಕಲ್ಯಾಣ ಸ್ವಾಮಿ ಭವನ'ದ ಉದ್ಘಾಟನೆಯು ಆಗಸ್ಟ್ 14ರ ಗುರುವಾರ ಬೆಳಗ್ಗೆ 11.35 ಕ್ಕೆ ನೆರವೇರಲಿದೆ.
ಕಲ್ಯಾಣ ಸ್ವಾಮಿಗಳು ಸೇರಿದಂತೆ ಮಠಾಧೀಶರ ಧರ್ಮ ಪರಿಷತ್ತಿನ ಶ್ರೀಗಳ ಸಾನಿಧ್ಯದಲ್ಲಿ ಬಳ್ಳಾರಿಯ ಲೋಕಸಭಾ ಸದಸ್ಯ ಈ. ತುಕಾರಾಮ್ ಅವರು ಭವನದ ಉದ್ಘಾಟನೆ ಮಾಡಲಿದ್ದಾರೆ ಎಂದು ಕಲ್ಯಾಣಸ್ವಾಮಿ ಮಠದ ಕಲ್ಯಾಣ ಶ್ರೀಗಳು ತಿಳಿಸಿದ್ದಾರೆ.
ಶಾಸಕರಾದ ಬಿ. ನಾಗೇಂದ್ರ, ನಾರಾ ಭರತರೆಡ್ಡಿ, ಅನ್ನಪೂರ್ಣ ಈ. ತುಕಾರಾಮ್, ಮಾಜಿ ಶಾಸಕರಾದ ಜಿ. ಸೋಮಶೇಖರರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ಡಿ. ತಾಯಣ್ಣ, ವೀರಶೈ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ಲು ಮಹಾಂತೇಶ್ ಮತ್ತು ಸರ್ವ ಸದಸ್ಯರು, ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ಭಕ್ತಾದಿಗಳು, ವಿವಿಧ ಮಠಾಧೀಶರು ನೂತನ ಕಟ್ಟಡದ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಕಾರ್ಯದರ್ಶಿ ಅಸುಂಡಿ ನಾಗರಾಜ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್