ಜೂನ್ 27ರಂದು ಹಲವು ಕ್ರೀಡೆಗಳಿಗೆ ವಿಶೇಷ ಆಯ್ಕೆ ಶಿಬಿರ
ರಾಯಚೂರು, 25 ಜೂನ್ (ಹಿ.ಸ.) : ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ ಹಾಗೂ ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ಮಟ್ಟದ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಹಾಗೂ
ಜೂನ್ 27ರಂದು ಹಲವು ಕ್ರೀಡೆಗಳಿಗೆ ವಿಶೇಷ ಆಯ್ಕೆ ಶಿಬಿರ


ರಾಯಚೂರು, 25 ಜೂನ್ (ಹಿ.ಸ.) :

ಆ್ಯಂಕರ್ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2025-26ನೇ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ ಹಾಗೂ ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ಮಟ್ಟದ ಅರ್ಹ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಪ್ರವೇಶಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿರುತ್ತದೆ. ಈ ಆಯ್ಕೆ ಶಿಬಿರಗಳಲ್ಲಿ ವಿವಿಧ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ನೀಡುವ ದೃಷ್ಟಿಯಿಂದ ಜೂನ್ 27 ನಾನಾ ಕ್ರೀಡೆಗಳಿಗೆ ವಿಶೇಷ ಆಯ್ಕೆ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

ಕಿರಿಯರ ವಿಭಾಗದ ಕ್ರೀಡಾ ವಸತಿ ಶಾಲೆಗಳ ಆಯ್ಕೆಯನ್ನು ಪ್ರಸ್ತುತ 7ನೇ ತರಗತಿ ಅಭ್ಯಾಸ ಮಾಡುತ್ತಿರುವ ಬಾಲಕ ಅಥವಾ ಬಾಲಕಿಯರಿಗಾಗಿ ದಿನಾಂಕ: 01-06-2025 ರಂದು 14 ವರ್ಷದೊಳಗಿರಬೇಕು ಮತ್ತು 8 ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು.

ಹಿರಿಯರ ವಿಭಾಗದ ಕ್ರೀಡಾ ವಸತಿ ಶಾಲೆಗಳ ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ : 01-06-2025 ರಂದು 18 ವರ್ಷದೊಳಗಿದ್ದು, ಪ್ರಥಮ ಪಿ.ಯು.ಸಿ ಪ್ರವೇಶ ಪಡೆಯಲು ಅರ್ಹರಿರಬೇಕು. ಆಯ್ಕೆಯನ್ನು ಪ್ರಸ್ತುತ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕ ಅಥವಾ ಬಾಲಕಿಯರಿಗಾಗಿ ಆಯ್ಕೆ ನಡೆಸಲಾಗುತ್ತಿದೆ. ಆಸಕ್ತರು ವ್ಯಾಸಾಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಮಾಡುತ್ತಿರುವ ತರಗತಿಯ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆ ದಿನದಂದು ಕಡ್ಡಾಯ ತರಬೇಕು. ಆಸಕ್ತ ಕ್ರೀಡಾಪಟುಗಳು ಈ ವಿಶೇಷ ಆಯ್ಕೆ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯದ ಯಾವುದೇ ಭಾಗದ ಕ್ರೀಡಾಪಟಗಳು ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ. ಆಯ್ಕೆಯಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಯಾವುದೇ ವಿಧವಾದ ಭತ್ಯೆ ನೀಡಲಾಗುವುದಿಲ್ಲ.

ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಚೇರಿ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣ ರಾಯಚೂರು ಇಲ್ಲಿ ಅಥವಾ ಖೇಲೋ ಇಂಡಿಯಾ ತರಬೇತುದಾರರು ಚಂದ್ರಶೇಖರ್ ಮೊಬೈಲ್ ಸಂಖ್ಯೆ: 9886551214ಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande