ಕೊಪ್ಪಳ, 26 ಜೂನ್ (ಹಿ.ಸ.)
ಆ್ಯಂಕರ್:
ಕೊಪ್ಪಳ ನಗರಸಭೆ ವ್ಯಾಪ್ತಿಯ ಗವಿಮಠ ರಸ್ತೆಯಲ್ಲಿರುವ ಶ್ರೀ ಶ್ವೇತಾಂಭರ ಸ್ಥಾನಿಕ ವಾಸಿ ಜೈನ ಸಂಘ ಟ್ರಸ್ಟ್(ರಿ) ಕೊಪ್ಪಳ ಇವರ ಹೆಸರಿನಲ್ಲಿರುವ ಜಾಗೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆಯನ್ನು ಕೋರಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಗವಿಮಠ ರಸ್ತೆಯಲ್ಲಿರುವ ಆಸ್ತಿಯ ಸ್ವತ್ತಿನ ಸಂಖ್ಯೆ:2-2-40-55 ನಿರ್ಧರಣಾ ಸಂಖ್ಯೆ: 1-06-598 ಹಳೆ ಸ್ವತ್ತಿನ ಸಂಖ್ಯೆ: 1-6-513 ಈ ಆಸ್ತಿಯು ಅಧ್ಯಕ್ಷರು, ಶ್ರೀ ಶ್ವೇತಾಂಭರ ಸ್ಥಾನಿಕ ವಾಸಿ ಜೈನ ಸಂಘ ಟ್ರಸ್ಟ್(ರಿ) ಕೊಪ್ಪಳ ಇವರ ಹೆಸರಿನಲ್ಲಿದ್ದು, ಈ ಜಾಗೆಯ ವಿಸ್ತೀರ್ಣ 4200 ಚದರ ಅಡಿ ಇರುತ್ತದೆ. ಆಸ್ತಿ ಮಾಲೀಕರು ಇದರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡುವಂತೆ ಅರ್ಜಿ ಸಲ್ಲಿಸಿರುವುದರಿಂದ ಪರವಾನಿಗೆ ನೀಡುವ ಕುರಿತು ಸಾರ್ವಜನಿಕರಲ್ಲಿ ಯಾರಿಗಾದರೂ ಆಕ್ಷೇಪಣೆ ಇದ್ದಲ್ಲಿ, ಈ ಪ್ರಕಟಣೆ ಪ್ರಕಟಗೊಂಡ 15 ದಿನಗಳೊಳಗಾಗಿ ಲಿಖಿತ ರೂಪದಲ್ಲಿ ಸೂಕ್ತ ಕಾರಣ ಮತ್ತು ದಾಖಲಾತಿಗಳೊಂದಿಗೆ ಈ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಮತ್ತು ಸೂಕ್ತ ಕಾರಣ ಹಾಗೂ ದಾಖಲಾತಿಗಳು ಇಲ್ಲದೇ ಇರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್