ನೂತನ ಕಟ್ಟಡಕ್ಕೆ ಕಚೇರಿ ಸ್ಥಳಾಂತರ
ರಾಯಚೂರು, 18 ಜೂನ್ (ಹಿ.ಸ.) : ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆವರಣದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ವೀಕ್ಷಣಾಲಯ ಮತ್ತು ಬಾಲ ನ್ಯಾಯಮಂಡಳಿ ರಾಯಚೂರ ಕಚೇರಿಯನ್ನು ಇದೀಗ ರಾಯಚೂರು ನಗರದ ಅಜಾದನಗರದಲ್ಲಿನ ಸಂಜೀವಿನಿ ಆಸ್ಪತ್ರೆಯ ಹಿಂದುಗಡೆ ಇರುವ ಶೇಖ್ ಇಮಾಮ
ನೂತನ ಕಟ್ಟಡಕ್ಕೆ ಕಚೇರಿ ಸ್ಥಳಾಂತರ


ರಾಯಚೂರು, 18 ಜೂನ್ (ಹಿ.ಸ.) :

ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆವರಣದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ವೀಕ್ಷಣಾಲಯ ಮತ್ತು ಬಾಲ ನ್ಯಾಯಮಂಡಳಿ ರಾಯಚೂರ ಕಚೇರಿಯನ್ನು ಇದೀಗ ರಾಯಚೂರು ನಗರದ ಅಜಾದನಗರದಲ್ಲಿನ ಸಂಜೀವಿನಿ ಆಸ್ಪತ್ರೆಯ ಹಿಂದುಗಡೆ ಇರುವ ಶೇಖ್ ಇಮಾಮ್ ರಸಿಡೆನ್ಸಿ 1ನೇ ಮಹಡಿಗೆ ಸ್ಥಳಾಂತರಿಸಲಾಗಿದೆ.

ಇನ್ನು ಮುಂದೆ ಗ್ರಾಹಕರು, ಸರ್ಕಾರಿ ವೀಕ್ಷಣಾಲಯ ಮತ್ತು ಬಾಲ ನ್ಯಾಯಮಂಡಳಿಯ ಕಚೇರಿಯ ಕೆಲಸಗಳಿಗಾಗಿ ಈ ಮೇಲಿನ ವಿಳಾಸಕ್ಕೆ ಮತ್ತು ದೂರವಾಣಿ ಸಂ:08532-229928ಗೆ ಸಂಪರ್ಕಿಸಬಹುದಾಗಿದೆ ಎಂದು ಸರ್ಕಾರಿ ವೀಕ್ಷಣಾಲಯ ಮತ್ತು ಬಾಲ ನ್ಯಾಯಮಂಡಳಿ ಕಚೇರಿಯ ಅಧೀಕ್ಷಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande