ಹಳೆಯ ದಿನಪತ್ರಿಕೆ, ನಿಯತಕಾಲಿಕೆಗಳ ವಿಲೇವಾರಿಗೆ ದರಪಟ್ಟಿ ಆಹ್ವಾನ
ರಾಯಚೂರು, 18 ಜೂನ್ (ಹಿ.ಸ.) : ಆ್ಯಂಕರ್ : ರಾಯಚೂರು ನಗರ ಕೇಂದ್ರ ಗ್ರಂಥಾಲಯ ಮುಖ್ಯ ಕಚೇರಿ ಹಾಗೂ ಅಧೀನದಲ್ಲಿ ಬರುವ ಎಲ್ಲಾ ಶಾಖಾ ಗ್ರಂಥಾಲಯಗಳಲ್ಲಿ ಸಂಗ್ರಹವಾಗಿರುವ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ವಿಲೇವಾರಿ ಮಾಡಲು ದರಪಟ್ಟಿ ಆಹ್ವಾನಿಸಲಾಗಿದೆ. 2024-25ನೇ ಸಾಲಿನ ದಿನಾಂಕ: 01.04.
ಹಳೆಯ ದಿನಪತ್ರಿಕೆ, ನಿಯತಕಾಲಿಕೆಗಳ ವಿಲೇವಾರಿಗೆ ದರಪಟ್ಟಿ ಆಹ್ವಾನ


ರಾಯಚೂರು, 18 ಜೂನ್ (ಹಿ.ಸ.) :

ಆ್ಯಂಕರ್ : ರಾಯಚೂರು ನಗರ ಕೇಂದ್ರ ಗ್ರಂಥಾಲಯ ಮುಖ್ಯ ಕಚೇರಿ ಹಾಗೂ ಅಧೀನದಲ್ಲಿ ಬರುವ ಎಲ್ಲಾ ಶಾಖಾ ಗ್ರಂಥಾಲಯಗಳಲ್ಲಿ ಸಂಗ್ರಹವಾಗಿರುವ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ವಿಲೇವಾರಿ ಮಾಡಲು ದರಪಟ್ಟಿ ಆಹ್ವಾನಿಸಲಾಗಿದೆ.

2024-25ನೇ ಸಾಲಿನ ದಿನಾಂಕ: 01.04.2024 ರಿಂದ 31.03.2025 ರವರೆಗೆ ನಗರ ಕೇಂದ್ರ ಗ್ರಂಥಾಲಯ, ರಾಯಚೂರು ಮುಖ್ಯ ಕಚೇರಿ ಹಾಗೂ ವಿವಿಧ ಶಾಖಾ ಗ್ರಂಥಾಲಯಗಳಲ್ಲಿ ಸಂಗ್ರಹವಾದ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ವಿಲೇವಾರಿ ಮಾಡಬೇಕಾಗಿದ್ದು, ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಖರೀದಿಸಲು ಇಚ್ಛೆಯುಳ್ಳವರು ತಮ್ಮ ದರಗಳನ್ನು ಕೆಳಗಿನ ನಿಬಂದನೆಗಳಿಗೆ ಒಳಪಟ್ಟು ಶಿಲ್ಡು ಮಾಡಿದ ಕವರುಗಳಲ್ಲಿ ಮುಖ್ಯ ಗ್ರಂಥಾಲಯಾಧಿಕಾರಿಗಳು, ನಗರ ಕೇಂದ್ರ ಗ್ರಂಥಾಲಯ, ರಂಗಮಂದಿರ ಹಿಂಭಾಗ, ರಾಯಚೂರು ಇವರ ಹೆಸರಿಗೆ ಜೂನ್ 27ರ ಸಂಜೆ 4 ಗಂಟೆಯೊಳಗೆ ತಲುಪುವಂತೆ ಖುದ್ದಾಗಿ ಇಲ್ಲವೇ ಅಂಚೆಯ ಮೂಲಕ ಸಲ್ಲಿಸಬಹುದು. ಅದೇ ದಿನ ಅಂದರೆ ಜೂನ್ 27ರಂದು ಸಂಜೆ 5 ಗಂಟೆಗೆ ಹಾಜರಿದ್ದವರ ಸಮಕ್ಷಮ ದರಪಟ್ಟಿಗಳನ್ನು ತೆರೆಯಲಾಗುವುದು.

ನಿಯತಕಾಲಿಕೆಗಳಿಗೆ ಅಂದರೆ ವಾರಪತ್ರಿಕೆ, ಅರ್ಧಮಾಸಿಕ, ಮಾಸಿಕ, ತೈಮಾಸಿಕ, ಅರ್ಧವಾರ್ಷಿಕ ಇತ್ಯಾದಿ ಸೇರಿ ಪ್ರತಿ ಕೆಜಿಗೆ ರೂಪಾಯಿಯಂತೆ ನಮೂದಿಸಬೇಕು. ದರಪಟ್ಟಿಯಲ್ಲಿ ಯಶಸ್ವಿಯಾದ ಸಂಸ್ಥೆಯವರು ಆದೇಶ ನೀಡಿದ 05 ಕೆಲಸದ ದಿನಗಳೊಳಗೆ ಹಳೆಯ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಸಮಕ್ಷಮ ತೂಕ ಮಾಡಿ ಸ್ಥಳದಲ್ಲಿಯೇ ಹಣ ಪಾವತಿಸಿ, ತೆಗೆದುಕೊಂಡು ಹೋಗಬೇಕು. ತಪ್ಪಿದಲ್ಲಿ ಅವರ ಇ.ಎಂ.ಡಿ ಹಣವನ್ನು ಮುಟ್ಟುಗೋಲು ಮಾಡಿಕೊಳ್ಳಲಾಗುವುದು.

ತೂಕ ಮತ್ತು ಅಳತೆ ಮಾಪನ ಇಲಾಖೆಯಿಂದ ಪ್ರಮಾಣೀಕರಿಸಿದ ಮಾಪನದಿಂದ ತೂಕ ಮಾಡಿ ಹಣವನ್ನು ಕೂಡಲೇ ಸ್ಥಳದಲ್ಲಿಯೇ ನಗದು ರೂಪದಲ್ಲಿ ಪಾವತಿಸಿ ನಂತರ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ತೆಗೆದುಕೊಂಡು ಹೋಗಬೇಕು. ದಿನಪತ್ರಿಕೆ, ನಿಯತಕಾಲಿಕೆಗಳು ಯಾವ ಸ್ಥಳದಲ್ಲಿ, ಯಾವ ರೀತಿಯಲ್ಲಿ ಇರುತ್ತದೆಯೋ ಅದೇ ರೀತಿಯಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ತೆಗೆದುಕೊಂಡು ಹೋಗತಕ್ಕದ್ದು. ತೂಕ ಪಡೆಯಲು ಚಾಲ್ತಿಯಲ್ಲಿರುವ ಇಲೆಕ್ರ್ಟಾನಿಕ್ ಯಂತ್ರವನ್ನು ಬಳಸತಕ್ಕದ್ದು ಸಾಮಗ್ರಿಗಳನ್ನು ಸಂಗ್ರಹಿಸತಕ್ಕದ್ದು., ಯಾವುದೇ ಕಾರಣ ನೀಡದೇ ದರಪಟ್ಟಿಗಳನ್ನು ಸ್ವೀಕರಿಸುವ ತಿರಸ್ಕರಿಸುವ ಹಕ್ಕು ಕೆಳಗೆ ರುಜು ಮಾಡಿದ ಅಧಿಕಾರಿಗಳಿಗೆ ಇರುತ್ತದೆ. ಇನ್ನೀತರ ಬೇರೆ ಬೇರೆ ನಿಬಂಧನೆಗಳಿಗೊಳಪಟ್ಟು ದರಪಟ್ಟಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಕೇಳಿ ಪಡೆಯುವುದು ಎಂದು ಮುಖ್ಯ ಗ್ರಂಥಲಯಾಧಿಕಾರಿ ನಿರ್ಮಲಾ ಹೆಚ್ ಹೊಸೂರ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande