ಬಳ್ಳಾರಿ : ಜೂ.20 ರಂದು ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ, 18 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿಯ ಬಿಸಲಹಳ್ಳಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಹಾಗೂ 33/11ಕೆ.ವಿಯ ರೂಪನಗುಡಿ ಉಪ-ಕೇಂದ್ರದಿಂದ ವಿದ್ಯುತ್ ಸರಬರಾಜು
ಬಳ್ಳಾರಿ : ಜೂ.20 ರಂದು ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ


ಬಳ್ಳಾರಿ, 18 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿಯ ಬಿಸಲಹಳ್ಳಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುತ್ತಿರುವುದರಿಂದ ಹಾಗೂ 33/11ಕೆ.ವಿಯ ರೂಪನಗುಡಿ ಉಪ-ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಮಾರ್ಗಗಳಲ್ಲಿ ಜೂ.20 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಬಾಬು ಅವರು ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಎಫ್-52 ಶಂಕರಬಂಡೆ ಐಪಿ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್, ಕಮ್ಮರಚೇಡು ಕೃಷಿ ಪ್ರದೇಶಗಳು.

ಎಫ್-53 ಶಂಕರಬಂಡೆ ಎನ್.ಜೆ.ವೈ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್ ಮಿಂಚೇರಿ, ಬುರ್ರನಾಯಕನಹಳ್ಳಿ ಗ್ರಾಮಗಳು.

ಎಫ್-54 ಬಿಸಲಹಳ್ಳಿ ಎನ್.ಜೆ.ವೈ ಫೀಡರ್ ಮಾರ್ಗದ ಬಿಸಲಹಳ್ಳಿ, ಜನತಾನಗರ, ಸೋಲಾರ್ ತಗ್ಗಿನಬೂದಿಹಾಳ್ ಗಾಮಗಳು.

ಎಫ್-55 ಅಸುಂಡಿ ಐಪಿ ಫೀಡರ್ ಮಾರ್ಗದ ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ ಕೃಷಿ ಪ್ರದೇಶಗಳು.

ಎಫ್-56 ಕಮ್ಮರಚೇಡು ಎನ್.ಜೆ.ವೈ ಫೀಡರ್ ಮಾರ್ಗದ ತಲಮಾಮಿಡಿ, ಕಮ್ಮರಚೇಡು, ತಗ್ಗಿನಬೂದಿಹಾಳ್, ಅಮರಾಪುರ, ಗೋಡೆಹಾಳ್, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ, ವಿಘ್ನೇಶ್ವರ ಕ್ಯಾಂಪ್, ಧನಲಕ್ಷ್ಮೀ ಕ್ಯಾಂಪ್, ಕೆರೆ ಕ್ಯಾಂಪ್, ಮಾಳೆಗಡ್ಡೆ ಕ್ಯಾಂಪ್ ಗ್ರಾಮಗಳು.

ಎಫ್-95 ರೂಪನಗುಡಿ ಐಪಿ ಫೀಡರ್ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಕೃಷಿ ಪ್ರದೇಶಗಳು.

ಎಫ್-96 ರೂಪನಗುಡಿ ಫೀಡರ್ ಎನ್.ಜೆ.ವೈ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಗ್ರಾಮಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande