
ನವದೆಹಲಿ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೂರದರ್ಶನದಲ್ಲಿ ಪ್ರಸಾರವಾಗುವ ‘ಸುಪ್ರಭಾತ’ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇದು ಬೆಳಗಿನ ಸಮಯವನ್ನು ತಾಜಾತನ ಮತ್ತು ಸಕಾರಾತ್ಮಕತೆಯಿಂದ ತುಂಬುತ್ತದೆ ಎಂದು ಹೇಳಿದರು.
ಯೋಗದಿಂದ ಭಾರತೀಯ ಜೀವನ ವಿಧಾನವರೆಗೆ ಹಲವು ವಿಷಯಗಳನ್ನು ಚರ್ಚಿಸುವ ಈ ಕಾರ್ಯಕ್ರಮವು ಭಾರತೀಯ ಸಂಪ್ರದಾಯಗಳು ಮತ್ತು ಮೌಲ್ಯಗಳ ಆಧಾರದ ಮೇಲೆ ಜ್ಞಾನ, ಸ್ಪೂರ್ತಿ ಮತ್ತು ಸಕಾರಾತ್ಮಕತೆಯ ಸಂಯೋಜನೆ ಆಗಿದೆ ಎಂದು ಪ್ರಧಾನಿ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ಬರೆದಿದ್ದಾರೆ.
ಕಾರ್ಯಕ್ರಮದಲ್ಲಿನ ‘ಸಂಸ್ಕೃತ ಸುಭಾಷಿತಂ’ ವಿಭಾಗವನ್ನು ವಿಶೇಷವಾಗಿ ಮೆಚ್ಚಿದ ಅವರು, ಇದು ಭಾರತದ ಸಂಸ್ಕೃತಿ–ಪರಂಪರೆಯ ಬಗ್ಗೆ ಹೊಸ ಜಾಗೃತಿ ಮೂಡಿಸುತ್ತಿದೆ ಎಂದು ಪ್ರಶಂಸಿಸಿದ್ದು, ಸುಪ್ರಭಾತ ವೀಕ್ಷಕರನ್ನು ಸಂಸ್ಕೃತಿಯೊಂದಿಗೆ ಸಂಪರ್ಕಿಸುವ ಪ್ರಯತ್ನ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa