ವಂದೇ ಮಾತರಂ ಬಗ್ಗೆ ಅರ್ಥಹೀನ ವಿವಾದ : ಪ್ರಿಯಾಂಕಾ ಗಾಂಧಿ
ನವದೆಹಲಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಂದೇ ಮಾತರಂ ಬಗ್ಗೆ ಸರ್ಕಾರ ಅರ್ಥಹೀನ ವಿವಾದ ಎಬ್ಬಿಸಿ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ದೂರ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಲೋಕ ಸಭೆಯಲ್ಲಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ವಂದೇ ಮಾತರಂ ಕಾಂಗ್ರೆಸ್‌ಗ
Priyanka


ನವದೆಹಲಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಂದೇ ಮಾತರಂ ಬಗ್ಗೆ ಸರ್ಕಾರ ಅರ್ಥಹೀನ ವಿವಾದ ಎಬ್ಬಿಸಿ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ದೂರ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಲೋಕ ಸಭೆಯಲ್ಲಿ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ವಂದೇ ಮಾತರಂ ಕಾಂಗ್ರೆಸ್‌ಗೆ ಪವಿತ್ರವಾದ ಹಾಡು ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ನಾಯಕರ ವಿರುದ್ಧ ಹೊಸ ಆರೋಪಗಳನ್ನು ಹೊರಿಸುವುದು ಮುಂಬರುವ ಬಂಗಾಳ ಚುನಾವಣೆಗಳ ರಾಜಕೀಯ ಉದ್ದೇಶದಿಂದಾಗಿದೆಯೆಂಬ ಶಂಕೆ ವ್ಯಕ್ತಪಡಿಸಿದ ಅವರು, “ನರೇಂದ್ರ ಮೋದಿ ಪ್ರಧಾನಿಯಾಗಿರುವಷ್ಟೇ ಸಮಯ ನೆಹರೂ ಜೈಲಿನಲ್ಲಿ ಕಳೆದಿದ್ದಾರೆ. ನೆಹರೂ ಕುರಿತು ಎಲ್ಲ ದೂರುಗಳನ್ನೂ ಒಂದೇ ಬಾರಿ ಚರ್ಚಿಸಿದರೆ ಸಾರ್ವಜನಿಕರ ಸಮಯ ನೈಜ ಸಮಸ್ಯೆಗಳ ಪರಿಹಾರಕ್ಕೆ ಬಳಸಬಹುದು” ಎಂದರು.

ದೇಶದಲ್ಲಿ ಹಣದುಬ್ಬರ, ನಿರುದ್ಯೋಗ, ಮಹಿಳಾ ಭದ್ರತೆ ಹಾಗೂ ಮಹಾನಗರಗಳ ಮಾಲಿನ್ಯ ಗಂಭೀರವಾಗಿರುವಾಗ ಸಣ್ಣ ವಿಷಯಗಳ ಕುರಿತು ಚರ್ಚೆ ನಡೆಸುವುದು ನ್ಯಾಯವಲ್ಲ ಎಂದು ಪ್ರಿಯಾಂಕಾ ಗಾಂಧಿ ಟೀಕಿಸಿದರು. ಇಸ್ರೋ, ಡಿಆರ್‌ಡಿಓ, ಐಐಟಿ, ಐಐಎಂ, ಏಮ್ಸ್ ಸೇರಿದಂತೆ ಅನೇಕ ಸಂಸ್ಥೆಗಳ ಅಡಿಪಾಯ ನೆಹರೂ ಇಟ್ಟಿದ್ದು, ಅವರ ಕೊಡುಗೆಯಿಲ್ಲದೆ ಭಾರತದ ಅಭಿವೃದ್ಧಿ ಅಸಾಧ್ಯವಾಗಿತ್ತು ಎಂದಿದ್ದಾರೆ.

ವಂದೇ ಮಾತರಂನ ಮೊದಲ ಎರಡು ಸಾಲುಗಳನ್ನು ರಾಷ್ಟ್ರಗೀತೆಯಾಗಿ ಅಳವಡಿಸುವ ಕುರಿತು ವಿವಾದ ಎಬ್ಬಿಸುವುದು ಸಂವಿಧಾನ ಸಭೆ ಹಾಗೂ ಗುರುದೇವ ರವೀಂದ್ರನಾಥ ಟ್ಯಾಗೋರ್ ವಿರುದ್ಧ ಅವಮಾನಕರ ಎಂದು ಅವರು ಅಭಿಪ್ರಾಯಪಟ್ಟಿದ್ದು. 1896ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಈ ಹಾಡು ಮೊತ್ತಮೊದಲು ಗಾಯನಗೊಂಡಿದ್ದು, ನಂತರ 1882ರಲ್ಲಿ ಆನಂದಮಠದಲ್ಲಿ ನಾಲ್ಕು ಚರಣಗಳನ್ನು ಸೇರಿಸಲಾಯಿತು ಎಂದು ಅವರು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande