ಬಿಜೆಪಿ, ದೇಶದಲ್ಲಿ ವಿಭಜನೆ ವಾತಾವರಣ ಮೂಡಿಸುತ್ತಿದೆ : ಮಮತಾ
ಕೋಲ್ಕತ್ತಾ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ನೀಡಿದ ಹೇಳಿಕೆಗಳ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಂದೇ ಮಾತರಂ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊ
Mamta


ಕೋಲ್ಕತ್ತಾ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಪ್ರಧಾನ ಮಂತ್ರಿ ನೀಡಿದ ಹೇಳಿಕೆಗಳ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಂದೇ ಮಾತರಂ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸುವ ಮೂಲಕ ಬಿಜೆಪಿ ದೇಶದಲ್ಲಿ ವಿಭಜನೆಯ ವಾತಾವರಣ ಮೂಡಿಸುತ್ತಿದೆ ಎಂದು ಅವರು ಆರೋಪಿಸಿದರು.

ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರು ರಾಷ್ಟ್ರಗೀತೆಗೆ ಆಯ್ದ ಭಾಗವೇ ಸೂಕ್ತವಾದದ್ದು, ಅದಕ್ಕೆ ಎಲ್ಲೂ ವಿವಾದದ ಅವಕಾಶವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

“ಬಿಜೆಪಿ ಎಲ್ಲದಕ್ಕೂ ಆಕ್ಷೇಪ ವ್ಯಕ್ತಪಡಿಸುವ ಪಕ್ಷ. ಕೆಲವೊಮ್ಮೆ ಗುರುದೇವ್ ಅವರನ್ನು ಗುರಿಯಾಗಿಸುತ್ತದೆ, ಮತ್ತೊಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನೇ ಪ್ರಶ್ನಿಸುತ್ತದೆ,” ಎಂದು ಮಮತಾ ಟೀಕಿಸಿದರು.

ಲೋಕ ಸಭೆಯಲ್ಲಿ ಪ್ರಧಾನಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ದೇಶವನ್ನು ಒಗ್ಗೂಡಿಸುವ ಹಾಡನ್ನು ವಿಭಜನೆಯ ರಾಜಕೀಯದೊಂದಿಗೆ ಜೋಡಿಸುವುದು ದುರದೃಷ್ಟಕರ ಎಂದು ಹೇಳಿದರು.

ಬ್ರಿಗೇಡ್ ಮೈದಾನದಲ್ಲಿ ನಡೆದ “ಐದು ಲಕ್ಷ ಜನರಿಗೆ ಗೀತಾ ಪಠಣ” ಕಾರ್ಯಕ್ರಮದಲ್ಲಿ ತಾವು ಭಾಗವಹಿಸದಿದ್ದ ಬಗ್ಗೆ ಅವರು ಸ್ಪಷ್ಟನೆ ನೀಡುತ್ತ, “ಇದು ನಿಜವಾದ ಸಾಂಸ್ಕೃತಿಕ ಕಾರ್ಯಕ್ರಮವಲ್ಲ ಬಿಜೆಪಿಯ ರಾಜಕೀಯ ವೇದಿಕೆ. ಗುರುದೇವ್, ನೇತಾಜಿ, ರಾಜಾ ರಾಮಮೋಹನ್ ರಾಯ್ ಹಾಗೆಯೇ ರಾಷ್ಟ್ರದ ಮಹನೀಯರನ್ನು ಅವಮಾನಿಸುವ ಸ್ಥಳದಲ್ಲಿ ನಾನು ಭಾಗವಹಿಸಲು ಸಾಧ್ಯವಿಲ್ಲ,” ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande