
ಖೈರಾಗಢ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಖೈರಾಗಢ ಜಿಲ್ಲೆಯಲ್ಲಿ ನಡೆದ ಪ್ರಮುಖ ನಕ್ಸಲ್ ಶರಣಾಗತಿ ಕಾರ್ಯಾಚರಣೆಯಲ್ಲಿ, 45 ಲಕ್ಷ ರೂ. ಬಹುಮಾನ ಹೊಂದಿದ್ದ ರಾಮಧರ್ ಮಜ್ಜಿ ಸೇರಿದಂತೆ 12 ಮಂದಿ ನಕ್ಸಲೀಯರು ಸೋಮವಾರ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ.
ಶರಣಾದವರಲ್ಲಿ ಪ್ರಮುಖನಾದ ರಾಮಧರ್ ಮಜ್ಜಿ CPIನ ಕೇಂದ್ರ ಸಮಿತಿ ಸದಸ್ಯ ಹಾಗೂ ಮಧ್ಯಪ್ರದೇಶ–ಮಹಾರಾಷ್ಟ್ರ–ಛತ್ತೀಸ್‌ಗಢ ವಲಯದ ಉಸ್ತುವಾರಿ. AK-47 ಆಯುಧದೊಂದಿಗೆ ಶರಣಾದ ಮಜ್ಜಿ ಈ ವಲಯದ ಪ್ರಮುಖ ಚಟುವಟಿಕೆಗಳಿಗೆ ನಿರ್ದೇಶನ ನೀಡುತ್ತಿದ್ದನೆಂದು ಪೊಲೀಸರು ಹೇಳಿದ್ದಾರೆ. ಮಜ್ಜಿಯ ಶರಣಾಗತಿಯು MMC ವಲಯದ ಜಾಲ ಕುಸಿತಕ್ಕೆ ಕಾರಣವಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ.
ಒಟ್ಟು 12 ಮಂದಿಯಲ್ಲಿ ಆರು ಮಹಿಳೆಯರು ಇದ್ದು, ಎಲ್ಲರೂ ಹಿಂಸಾಚಾರವನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಲು ಬಯಸಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಸರ್ಕಾರದ ಪುನರ್ವಸತಿ ಯೋಜನೆಯಡಿ ಇವರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಶರಣಾಗತಿ ಭದ್ರತಾ ಪಡೆಗಳ ನೈತಿಕತೆಯನ್ನು ಹೆಚ್ಚಿಸಿದ್ದು, ಪ್ರದೇಶದಲ್ಲಿ ನಕ್ಸಲರ ಆಧಾರ ಜಾಲ ಕುಸಿಯುತ್ತಿರುವುದು ಮಹತ್ವದ ವಿದ್ಯಮಾನ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa