ವಂದೇ ಮಾತರಂ ಗುಲಾಮಗಿರಿಯಿಂದ ವಿಮುಕ್ತಿಯ ಸಂಕೇತ : ಪ್ರಧಾನಿ
ನವದೆಹಲಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಂದೇ ಮಾತರಂ ರಚನೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ಲೋಕ ಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹೋರಾಟದ ಆತ್ಮ, ಸ್ಫೂರ್ತಿ ಮತ್ತು ಏಕತೆಯ ಮಂತ್ರವಾಗಿತ್ತು ಎಂದು ಹೇಳಿದರು. ವಂದೇ
Pm


ನವದೆಹಲಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಂದೇ ಮಾತರಂ ರಚನೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ ಲೋಕ ಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಂದೇ ಮಾತರಂ ಭಾರತದ ಸ್ವಾತಂತ್ರ್ಯ ಹೋರಾಟದ ಆತ್ಮ, ಸ್ಫೂರ್ತಿ ಮತ್ತು ಏಕತೆಯ ಮಂತ್ರವಾಗಿತ್ತು ಎಂದು ಹೇಳಿದರು.

ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದಾಗ ದೇಶ ಗುಲಾಮಗಿರಿಯಲ್ಲಿ ಬಂಧಿತವಾಗಿತ್ತು; 100ನೇ ವರ್ಷದಲ್ಲಿ ತುರ್ತು ಪರಿಸ್ಥಿತಿಯಲ್ಲಿತ್ತು. ಈ ಹಾಡು ಸದಾ ಹೋರಾಟ, ತ್ಯಾಗ ಮತ್ತು ಸ್ಫೂರ್ತಿಯ ಪ್ರತೀಕವಾಗಿತ್ತು ಎಂದರು.

1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ಬಂಕಿಮ್ ಚಂದ್ರ ಚಟರ್ಜಿ ರಚಿಸಿದ ವಂದೇ ಮಾತರಂ, ಬ್ರಿಟಿಷರ ‘ಗಾಡ್ ಸೇವ್ ದ ಕ್ವೀನ್’ ಘೋಷಣೆಗೆ ಭಾರತೀಯರ ಬಲಿಷ್ಠ ಪ್ರತಿಕ್ರಿಯೆಯಾಗಿತ್ತು ಎಂದು ಹೇಳಿದರು.

ಬ್ರಿಟಿಷರು ಈ ಹಾಡಿನ ಪ್ರಭಾವಕ್ಕೆ ಭಯಗೊಂಡು, ಅದನ್ನು ನಿಷೇಧಿಸಲು ಕಾನೂನುಗಳನ್ನು ಜಾರಿಗೊಳಿಸಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಅವರು ನೆನಪಿಸಿದರು.

ವಂದೇ ಮಾತರಂ ಕೇವಲ ರಾಜಕೀಯ ಘೋಷಣೆ ಆಗಿರಲಿಲ್ಲ ಭಾರತೀಯರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವ ಪವಿತ್ರ ಪ್ರತಿಜ್ಞೆಯಾಗಿತ್ತು, ಬ್ರಿಟಿಷರ ‘ವಿಭಜಿಸಿ ಆಳುವ’ ನೀತಿಯ ನಡುವೆಯೂ ಬಂಗಾಳದ ಬೌದ್ಧಿಕ ಶಕ್ತಿ ಮತ್ತು ವಂದೇ ಮಾತರಂ ಚಳುವಳಿ ದೇಶಕ್ಕೆ ಹೊಸ ಜಾಗೃತಿ ತಂದಿತು ಎಂದು ಪ್ರಧಾನಿ ಹೇಳಿದರು.

ವಂದೇ ಮಾತರಂ 150 ವರ್ಷಗಳ ಸಂಭ್ರಮವು ಆಡಳಿತ-ಪ್ರತಿ ಪಕ್ಷದ ವಿಚಾರವಲ್ಲ ಸಂಸತ್ತಿನ ಮೌಲ್ಯಗಳು ಮತ್ತು ದೇಶದ ಹೆಮ್ಮೆಯನ್ನು ಪುನಃಸ್ಥಾಪಿಸುವ ಪ್ರಮುಖ ಕ್ಷಣ ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande