


ರಾಯಚೂರು, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯ ಆಡಳಿತದ ಗುಣಮಟ್ಟ ಮತ್ತು ಸೇವಾ ವಿತರಣೆಯನ್ನು ಹೊಸ ಮಟ್ಟಕ್ಕೇರಿಸುವ ದಿಶೆಯಲ್ಲಿ ಪಾಲಿಕೆಯ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎರಡು ದಿನದ ವಿಶೇಷ ಸಾಮರ್ಥ್ಯವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಹಾನಗರ ಪಾಲಿಕೆ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರ ನೇತೃತ್ವದಲ್ಲಿ ನಗರದ ಹಳೆ ನಗರಸಭೆಯ ಸಭಾಂಗಣದಲ್ಲಿ ತರಬೇತಿಗೆ ಚಾಲನೆ ಸಿಕ್ಕಿತು.
ಅನುಭವಿ ತಜ್ಞರಾದ ಮಂಗಳೂರಿನ ಸಹಾಯಕ ಪ್ರಾಧ್ಯಾಪಕರು & ತರಬೇತುದಾರರಾದ ಡಾ.ನಂದೀಶ್ ವೈ.ಡಿ., ಮತ್ತು ಮೈಸೂರಿನ ಆಡಳಿತ ತರಬೇತುದಾರರಾದ ಡಾ.ಗಂಗಾಧರ ವೈ.ವಿ. ಅವರು ತರಬೇತಿ ನೀಡಿದರು.
ಪಾಲಿಕೆಯ ಕಂದಾಯ ಶಾಖೆ, ಅಡ್ಮಿನ್ ಶಾಖೆ, ಆರೋಗ್ಯ, ಎಂಜಿನಿಯರಿ0ಗ್, ಉದ್ಯಾನ, ಲೆಕ್ಕಶಾಖೆ ಹಾಗೂ ಇತರೆ ವಿಭಾಗಗಳ ಸಿಬ್ಬಂದಿಯನ್ನು ಒಳಗೊಂಡು ಎಲ್ಲಾ ಶ್ರೇಣಿಯ ಸಿಬ್ಬಂದಿ ತರಬೇತಿಯಲ್ಲಿ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್