ಶ್ರೀ ಮಠದ ಜಾತ್ರೆಗೆ ನಮ್ಮದು ಅಳಿಲು ಸೇವೆ : ವಾರ್ತಾಧಿಕಾರಿ ಸುರೇಶ್ ಜಿ
ಕೊಪ್ಪಳ, 31 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧಿಪಡೆದ ಶ್ರೀಗವಿಸಿದ್ಧೇಶ್ವರ ಜಾತ್ರೆ ಮಹೋತ್ಸವಕ್ಕೆ ಅನೇಕ ಭಕ್ತರು ಸ್ವಯಂ ಪ್ರೇರಿತವಾದ ಸೇವೆಯನ್ನು ಮಾಡುತ್ತಾರೆ. ಶ್ರೀ ಮಠದ ಜಾತ್ರೆಗೆ ಅಳಿಲು ಸೇವೆ ಮಾಡುವ ಅವಕಾಶ ನಮ್ಮದಾಗಿದೆ ಎಂದು ಕೊಪ್ಪಳ ಜಿಲ್ಲಾ ವ
ಕೊಪ್ಪಳ : ಗವಿಮಠದ ಜಾತ್ರೆ : ದೀಪಾಲಂಕಾರ


ಕೊಪ್ಪಳ, 31 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದಕ್ಷಿಣ ಭಾರತದ ಕುಂಭಮೇಳವೆಂದು ಪ್ರಸಿದ್ಧಿಪಡೆದ ಶ್ರೀಗವಿಸಿದ್ಧೇಶ್ವರ ಜಾತ್ರೆ ಮಹೋತ್ಸವಕ್ಕೆ ಅನೇಕ ಭಕ್ತರು ಸ್ವಯಂ ಪ್ರೇರಿತವಾದ ಸೇವೆಯನ್ನು ಮಾಡುತ್ತಾರೆ.

ಶ್ರೀ ಮಠದ ಜಾತ್ರೆಗೆ ಅಳಿಲು ಸೇವೆ ಮಾಡುವ ಅವಕಾಶ ನಮ್ಮದಾಗಿದೆ ಎಂದು ಕೊಪ್ಪಳ ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಜಿ ಹೇಳಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಜಾತ್ರೆ ಮಹೋತ್ಸವಕ್ಕೆ ದಿನಾಂಕ ದಿನಗಣನೆ ಆರಂಭವಾದದ್ದು ಹಾಗೂ ಜಾತ್ರೆಯ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳ ಮಾಹಿತಿಯನ್ನು ಭಕ್ತರಿಗೆ ತಲುಪಿಸಲು ಮಾಧ್ಯಮದವರಿಗೆ ಅನುಕೂಲವಾಗಲು ಇಂದು ಇನಾಂಕ 31.12.2025 ರಂದು ಬೆಳಿಗ್ಗೆ 10:30 ಕ್ಕೆ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಜಾತ್ರೋತ್ಸವದ ನಿಮಿತ್ಯ ಸಿದ್ಧಪಡಿಸಿದ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಇಂತಹ ಒಂದು ಬೃಹತ್ ಜಾತ್ರೆಯಲ್ಲಿ ಯಾವುದೇ ಅಹಿತಕರವಾದ ಘಟನೆಗಳು ನಡೆದ ಉದಾಹರಣೆಗಳೇ ಇಲ್ಲ ಇದಕ್ಕಲ್ಲಾ ಕಾರಣ ಶ್ರೀ ಗವಿಸಿದ್ಧೇಶ್ವರರ ಶಕ್ತಿ. ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಅಮೃತವಾಣಿ ಜೀವನವನ್ನು ಉದ್ಧರಿಸುತ್ತವೆ.

ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸ ಶ್ರೀ ಮಠವು ಮಾಡುತ್ತಿದೆ. ಶ್ರೀ ಮಠದ ಸಾಂಸ್ಕøತಿಕ ಸೇವೆಗಳನ್ನು ಪ್ರಸಾರ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಚನ್ನಬಸವ ಹಾಗೂ ಅನೇಕ ಪತ್ರಿಕಾ ಹಾಗೂ ದೂರದರ್ಶನ ಮಾಧ್ಯಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande