
ಗದಗ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಕೋಗಿಲೆ ಲೇಔಟ್‍ನಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೀಸಲಿಟ್ಟ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಂಡ ವಲಸಿಗರಿಗೆ ರಾಜ್ಯ ಸರ್ಕಾರ ಅವರಿಗೆ ಮನೆ ನೀಡಲು ನಿರ್ಧರಿಸಿದ್ದು ಇದೊಂದು ನಾಚಿಕೆಗೆಡಿನ ತೀರ್ಮಾನವಾಗಿದೆ. ಕನ್ನಡಿಗರೂ ಹತ್ತಾರು ವರ್ಷಗಳಿಂದ ಮನೆಗಳಿಗಾಗಿ ಅರ್ಜಿ ಸಲ್ಲಿಸಿದರು ಅವರಿಗೆ ಮನೆಯನ್ನು ನೀಡದೇ ಕನ್ನಡಿಗರಿಗೆ ಚಿಪ್ಪನ್ನು ನೀಡಿ ಕೇರಳದಿಂದ ಹಾಗು ಬೇರೆ ರಾಜ್ಯದಿಂದ ಬಂದ ಅಕ್ರಮ ವಲಸಿಗರಿಗೆ ಮನೆಯನ್ನು ನೀಡುತ್ತಿರುವದು ಇದೊಂದು ನಾಚಿಕೆಗೇಡಿನ ತೀರ್ಮಾನವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ. ಹಿರೇಮಠರವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರ ಖಂಡಿಸಿದ್ದಾರೆ.
ಉತ್ತರ ಕರ್ನಾಟಕದಿಂದ ಲಕ್ಷಾಂತರ ಜನ ಕಡುಬಡವರು ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ವಲಸೆ ಹೋಗಿ ಕಟ್ಟಡ ಕಾರ್ಮಿಕರಾಗಿ, ದಿನಗೂಲಗಳಾಗಿ, ಬೀದಿಬದಿ ವ್ಯಾಪಾರಸ್ತರಾಗಿ, ಮನೆಕೆಲಸದವರಾಗಿ, ವಾಚಮನ್ ಉದ್ಯೋಗ ಮಾಡುವವರಾಗಿ ಕಳೆದ 30-40 ವರ್ಷಗಳಿಂದ ಅಸಂಘಟಿತ ವಲಯಗಳಲ್ಲಿ ದುಡಿಯುವ ಅವರು ಬೆಂಗಳೂರಿನ ಅಭಿವೃದ್ಧಿ ಬೆನ್ನೆಲಬು ಆಗಿದ್ದಾರೆ. ಅವರು ಇಂದಿಗೂ ಶಡ್‍ಗಳಲ್ಲಿ, ಕೊಳಗೇರಿಗಳಲ್ಲಿ ಇಲ್ಲವೇ ಸಣ್ಣ ಬಾಡಿಗೆ ಮನೆಯಲ್ಲಿ ಅಸಹನೀಯ ಸ್ಥೀತಿಯಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅವರು ಕಳೆದ ಅನೇಕ ವರ್ಷಗಳಿಂದ ಆಶ್ರೆಯ ಮನೆಗಳಿಗಾಗಿ ಅರ್ಜಿಯನ್ನು ಸಲ್ಲಿಸಿದರೂ ಕೂಡ ಈವರೆಗೆ ಅವರಿಗೆ ಮನೆಗಳು ಸಿಕ್ಕಿರುವುದಿಲ್ಲಾ. ಮನೆಗಾಗಿ ಲಕ್ಷಾಂತರ ಅರ್ಜಿಯನ್ನು ಸಲ್ಲಿಸಿದ್ದ ಕನ್ನಡಿಗರನ್ನು ಕಡೆಗಣಿಸಿ ಕೇವಲ ಎರಡೇ ದಿನದಲ್ಲಿ ಕೇರಳ ವಲಸಿಗರಿಗೆ ಮನೆ ಕೊಡಲು ಮುಂದಾಗಿರುವದು ಕನ್ನಡಗರಿಗೆ ಮಾಡಿದ ದ್ರೋಹವಾಗಿದೆ.
ಎಆಯ್‍ಸಿಸಿ ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲರವರು ಒಂದು ಫೋನ್ ಕರೆಯ ಮುಖಾಂತರ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಗಳು ಹೆದರಿ ಮುಖ್ಯಮಂತ್ರಿಗಳು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಹಾಗು ಉಪಮುಖ್ಯಮಂತ್ರಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಅವರು ವೇಣುಗೊಪಾಲರವರ ಆದೇಶಕ್ಕೆ ತಲೆಭಾಗಿ ಕೇರಳದ ಅಕ್ರಮ ವಲಸಿಗರಿಗೆ ತರಾತುರಿಯಾಗಿ ಕೇವಲ 4 ದಿನದಲ್ಲಿ ಮನೆಯನ್ನು ಕೊಡಲು ನಿರ್ಧರಿಸಿದ್ದು ಇದೊಂದು ನಾಚಿಕೆಗೇಡಿನ ತೀರ್ಮಾನವಾಗಿದೆ. ಸ್ಥಳೀಯ ಬಡವರಿಗೆ ಮನೆಯನ್ನು ನೀಡದೆ ಅಕ್ರಮ ವಲಸಿಗರಿಗೆ ಇಷ್ಟು ವೇಗವಾಗಿ ಮನೆ ಮಂಜೂರಾಗಿರುವ ಇತಿಹಾಸ ಇದು ಕರ್ನಾಟದಲ್ಲಿ ಮೊದಲು. ಕೇರಳದಲ್ಲಿ ಆನೆ ದಾಳಿಯಿಂದ ಸತ್ತರೆ, ಪ್ರವಾಹದಿಂದ ಮೃತಪಟ್ಟರೆ ಕರ್ನಾಟಕದಿಂದ ಪರಿಹಾರ ನೀಡಲು ಕಾಂಗ್ರೇಸ್ ನಾಯಕರು ಸೂಚಿಸುವರು.
ಕೇರಳದಲ್ಲಿ ಬರಲಿರುವ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೇಸ್ ಪಕ್ಷ ಕರ್ನಾಟಕದ ಹಿತವನ್ನು ಕಡೆಗಣಿಸಿ ಕೇರಳದ ಹಿತವನ್ನು ಬಯಸುತ್ತಿರುವದು. ಕೇವಲ ರಾಜಕೀಯ ಲಾಭಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕನ್ನಡಿಗರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿರುವದು ದುರ್ದೈವದ ಸಂಗತಿಯಾಗಿದೆ. ಈ ಕೂಡಲೇ ವಲಸಿಗರಿಗೆ ನೀಡುವ ಕರ್ನಾಟಕ ಜನತೆಯ ತೆರಿಗೆಯ ಹಣದಲ್ಲಿ ನಿರ್ಮಿಸಿದ ಮನೆಗಳನ್ನು ಅಕ್ರಮ ವಲಸಿಗರಿಗೆ ನೀಡಬಾರದೆಂದು ಬಿಜೆಪಿ ಜಿಲ್ಲಾ ವಕ್ತಾರರಾದ ಎಂ.ಎಂ. ಹಿರೇಮಠರವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP