
ರಾಯಚೂರು, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2025-26ನೇ ಸಾಲಿನ ನೇಕಾರರ ಪ್ಯಾಕೇಜ್ ಯೋಜನೆಯಡಿ ಎಸ್.ಸಿ.ಎಸ್.ಪಿ, ಟಿ.ಎಸ.ಪಿ, ಎಸ್‌ಎಮ್‌ಇ ಯೋಜನೆಯಡಿ ಸಹಾಯಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ/ಪಾಲುದಾರಿಕೆ ಸಂಸ್ಥೆ/ಕ0ಪನಿ/ಜವಳಿ ಸಹಕಾರಿ ಸಂಘ/ಸ0ಸ್ಥೆಗಳು ಜವಳಿ ಕ್ಷೇತ್ರಕ್ಕೆ ಸಂಬ0ಧಿಸಿದ ಸಣ್ಣ ಮತ್ತು ಅತಿಸಣ್ಣ (ಎಸ್.ಎಮ್.ಇ) ಘಟಕಗಳನ್ನು ಪ್ರಾರಂಭಿಸುವುದನ್ನು ಉತ್ತೇಜಿಸಲು ಯಂತ್ರೋಪಕರಣಗಳೊ0ದಿಗೆ ಸ್ಥಾಪಿಸುವ ಜವಳಿ ಘಟಕಗಳಿಗೆ ಸರ್ಕಾರದಿಂದ ಶೇ.75ರಷ್ಟು ಬಂಡವಾಳ ಹೂಡಿಕೆ ಸಹಾಯಧನ ಒದಗಿಸುವ ಯೋಜನೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದೆ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ವೈಯಕ್ತಿಕ ಫಲಾನುಭವಿ/ಪಾಲುದಾರಿಕೆ ಸಂಸ್ಥೆ/ಕ0ಪನಿ/ಜವಳಿ ಸಹಕಾರಿ ಸಂಘ/ಸ0ಸ್ಥೆಯ ವತಿಯಿಂದ ಜವಳಿ ಕ್ಷೇತ್ರಕ್ಕೆ ಸಂಬ0ಧಿಸಿದ ಸಣ್ಣ ಮತ್ತು ಅತಿ ಸಣ್ಣ (ಎಸ್.ಎಮ್.ಇ) ಘಟಕಗಳನ್ನು ಸ್ಥಾಪಿಸಲು ಆಸಕ್ತ ಉದ್ದಿಮೆದಾರರಿಂದ ಪೂರ್ಣ ಪ್ರಮಾಣದ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು 2026ರ ಜನವರಿ 23ರೊಳಗಾಗಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರವರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಉರ್ದು ಶಾಲೆಯ ಹತ್ತಿರ, ಅರಬ್ ಮೊಹಲ್ಲಾ ರಾಯಚೂರು. ಅಥವಾ ದೂರವಾಣಿ ಸಂಖ್ಯೆ:08532-233429ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್