ಶ್ರದ್ಧೆ, ಭಕ್ತಿಗಳಿಂದ ನೆರವೇರಿದ ಅಲ್ಲೀಪುರ ಮಹಾದೇವತಾತನ ಜಾತ್ರಾ ಮಹೋತ್ಸವ
ಬಳ್ಳಾರಿ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಅಲ್ಲೀಪುರ ಮಹಾದೇವತಾತನವರ ಶ್ರೀಮಠದ ಮಹಾರಥೋತ್ಸವವು ಮಂಗಳವಾರ ಸಂಜೆ 4.40 ಕ್ಕೆ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಅದ್ಧೂರಿಯಾಗಿ ನೆರವೇರಿತು. ಡಿಸೆಂಬರ್ 30ರ ಮಂಗಳವಾರ ಬ್ರಾಹ್ಮೀ ಮುಹೂರ್
ಶ್ರದ್ಧೆ, ಭಕ್ತಿಗಳಿಂದ ನೆರವೇರಿದ ಅಲ್ಲೀಪುರ ಮಹಾದೇವತಾತನ ಜಾತ್ರಾ ಮಹೋತ್ಸವ


ಶ್ರದ್ಧೆ, ಭಕ್ತಿಗಳಿಂದ ನೆರವೇರಿದ ಅಲ್ಲೀಪುರ ಮಹಾದೇವತಾತನ ಜಾತ್ರಾ ಮಹೋತ್ಸವ


ಬಳ್ಳಾರಿ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಅಲ್ಲೀಪುರ ಮಹಾದೇವತಾತನವರ ಶ್ರೀಮಠದ ಮಹಾರಥೋತ್ಸವವು ಮಂಗಳವಾರ ಸಂಜೆ 4.40 ಕ್ಕೆ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧೆ, ಭಕ್ತಿ ಮತ್ತು ಸಮರ್ಪಣಾ ಭಾವದಿಂದ ಅದ್ಧೂರಿಯಾಗಿ ನೆರವೇರಿತು.

ಡಿಸೆಂಬರ್ 30ರ ಮಂಗಳವಾರ ಬ್ರಾಹ್ಮೀ ಮುಹೂರ್ತದಲ್ಲಿ ಮಂಗಲ ಕಲಶ ಹಾಗೂ ವೀರಗಾಸೆ ನೃತ್ಯದೊಂದಿಗೆ ಗಂಗೆಯನ್ನು ತಂದು ಬೆಳಗ್ಗೆ 5 ಘಂಟೆಗೆ ಶ್ರೀ ಮಹಾದೇವತಾತನವರ ಮಡಿತೇರು ಎಳೆಯಲಾಯಿತು.

ಭಕ್ತಾದಿಗಳಿಗೆ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಪ್ರಸಾದವಾಗಿ ವಿತರಣೆ ಮಾಡಲಾಯಿತು. ಸಾವಿರಾರು ಭಕ್ತಾಧಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಡಿಸೆಂಬರ್ 31ರ ಬುಧವಾರ ಸಂಜೆ 4 ಗಂಟೆಗೆ ಶ್ರೀಮಠದ ಆವರಣದಲ್ಲಿ ಕಡುಬಿನ ಕಾಳಗ ನಡೆಯಲಿದೆ. ರಥೋತ್ಸವದ ಅಂಗವಾಗಿ ಶ್ರೀಮಠದಲ್ಲಿ ತಾತನವರ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ನೆರವೇರಿದವು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande