
ಗಂಗಾವತಿ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿಯ ಇನಾಮ ವೀರಾಪುರ ಗ್ರಾಮದ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಮಾನ್ಯ ಪಾಟೀಲ್ ಎನ್ನುವ ಯುವತಿಯನ್ನು ಆಕೆಯ ಕುಟುಂಬಸ್ಥರೆ ಕೊಲೆ ಮಾಡಿದ್ದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದ್ದು, ಕೂಡಲೆ ಕೊಲೆಗೆಡುಕರನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕೆಂದು ಅಖಿಲ ಭಾರತ ಮಾದಿಗ ದಂಡೋರಾ ಗಂಗವತಿ ತಾಲೂಕಾ ಸಮಿತಿ ಗಂಗವತಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು, ಯುವಕ ವಿವೇಕಾನಂದ ಇವರಿಗೆ ಸರಕಾರಿ ಉದ್ಯೋಗ ನೀಡಬೇಕು, ನ್ಯಾಯಯುತ ಪರಿಹಾರ ಸರಕಾರ ನೀಡಬೇಕು, ಕೊಲೆಗೆಡುಕು ಪ್ರಕಾಶ್ ಪಾಟೀಲ್ ಇತರರಿಗೆ ಕಠಿಣ ಶಿಕ್ಷೆ ನೀಡಬೇಕು, ರಾಜ್ಯದಾದ್ಯಂತ ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಕನಕಪ್ಪ ದೊಡ್ಡಮನಿ, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಸಿದ್ದಾಪುರ, ಪದಾಧಿಕಾರಿಗಳಾದ ಗುಂಡಪ್ಪ ನೀಲೋಗಲ್, ಯಮನೂರಪ್ಪ ಗೋನಾಳ, ರಮೇಶ್ ಢಣಾಪುರ ಹಾಗು ಯಮನೂರಪ್ಪ ಚುಕ್ಕಾಡಿ ಇತರರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್