ರಾಯಚೂರು : ಜನವರಿ 1ರಿಂದ ಜೆಸ್ಕಾಂ ಹೊಸ ಲೈನ್‌ಲಿಂಕ್ ಆರಂಭ
ರಾಯಚೂರು, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪವಿಭಾಗ-2 ಶಾಖೆ-3ರಲ್ಲಿ 110ಕೆವಿ ವಡವಟ್ಟಿ ಉಪ ಕೇಂದ್ರ ದಿಂದ ಹೊರ ಹೊಮ್ಮುವ ಡ್ಲೂ-10 ಮುನ್ನೂರುವಾಡಿಗೆ 110ಕೆವಿ ಜವಹಾರ ನಗರ ಉಪ ಕೇಂದ್ರ ದಿಂದ ಹೊಸದಾಗಿ ಲೈನ್‌ಲಿಂಕ್ ಅನ್ನು ನಿರ್ಮಿಸಲಾಗಿದೆ. ಜನವರಿ
ರಾಯಚೂರು : ಜನವರಿ 1ರಿಂದ ಜೆಸ್ಕಾಂ ಹೊಸ ಲೈನ್‌ಲಿಂಕ್ ಆರಂಭ


ರಾಯಚೂರು, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪವಿಭಾಗ-2 ಶಾಖೆ-3ರಲ್ಲಿ 110ಕೆವಿ ವಡವಟ್ಟಿ ಉಪ ಕೇಂದ್ರ ದಿಂದ ಹೊರ ಹೊಮ್ಮುವ ಡ್ಲೂ-10 ಮುನ್ನೂರುವಾಡಿಗೆ 110ಕೆವಿ ಜವಹಾರ ನಗರ ಉಪ ಕೇಂದ್ರ ದಿಂದ ಹೊಸದಾಗಿ ಲೈನ್‌ಲಿಂಕ್ ಅನ್ನು ನಿರ್ಮಿಸಲಾಗಿದೆ. ಜನವರಿ 1ರಿಂದ ಹೊಸದಾಗಿ ಲೈನ್‌ಲಿಂಕ್ ಮಾರ್ಗವು ಆರಂಭವಾಗುತ್ತಿದ್ದು, ಗ್ರಾಹಕರು ವಿದ್ಯುತ್ ಕಂಬಗಳಿಗೆ ದನ, ಕರು, ಕುರಿ ಹಾಗೂ ಮತ್ತಿತರ ಪ್ರಾಣಿಗಳನ್ನು ಕಟ್ಟುವುದು ವಿದ್ಯುತ್ ಕಂಬಗಳ ಬಳಿ ನಿಲ್ಲುವುದು ಮತ್ತಿತರ ಚಟುವಟಿಕೆಗಳನ್ನು ಮಾಡಬಾರದೆಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande